Thursday, May 2, 2024
spot_imgspot_img
spot_imgspot_img

ತಪಾಸಣೆ ನೆಪದಲ್ಲಿ ಮೋಜು-ಮಸ್ತಿ ಅರಣ್ಯ ಅಧಿಕಾರಿಗಳ ಬೆವರಿಳಿಸಿದ ಗ್ರಾಮಸ್ಥರು.!

- Advertisement -G L Acharya panikkar
- Advertisement -

ಚಿಕ್ಕಮಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು. ಕೊರೋನಾ ಮಾರ್ಗಸೂಚಿಯಂತೆ, ಎಲ್ಲವೂ ಬಂದ್ ಆಗಿದೆ. ಹೀಗಿದ್ದೂ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ, ಯಾವುದಕ್ಕೂ ಕ್ಯಾರೆ ಎನ್ನದೇ, ಮೋಜು-ಮಸ್ತಿಗೆ ತೆರಳಿದ್ದಾರೆ.

ತಪಾಸಣೆ ನೆಪದಲ್ಲಿ ಮೋಜು-ಮಸ್ತಿಗೆ ತೆರಲಿದ ಅಧಿಕಾರಿಗಳನ್ನು ಗಮನಿಸಿದ ಸ್ಥಳೀಯರು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಮೋಜು-ಮಸ್ತಿ ಮಾಡುತ್ತಿದ್ದಂತ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.

ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ನೇತೃತ್ವದಲ್ಲಿ ಭದ್ರಾ ಅಭಯಾರಣ್ಯದ ಸೀಗೆಖಾನ್ ಪ್ರವಾಸಿ ಮಂದಿರದಲ್ಲಿ ಪಾರ್ಟಿ ಮಾಡಿ ಮತ್ತೆ ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿಗೆ ಹೊರಟಿದ್ದಾರೆ.


ಹೀಗೆ ಕಾರು-ಜೀಪುಗಳಲ್ಲಿ ಹೊರಟಂತ ಹಿರಿಯ ಅಧಿಕಾರಿಗಳು ಹಾಗೂ ಅವರ ತಂಡವನ್ನು ಸಂತವೇರಿ ಬಳಿ ತಡೆದಂತ ಗ್ರಾಮಸ್ಥರು, ಕೊರೋನಾ ಟೈಮ್ ನಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದಾರೆ. ಸೋಂಕಿನ ಮುಂಜಾಗ್ರತಾ ನಿಯಮಗಳನ್ನು ಪಾಲಿಸದಂತ ಅಧಿಕಾರಿಗಳನ್ನು ಬೆವರಿಳಿಸಿದ್ದಾರೆ.


ಯಾವಾಗ ಗ್ರಾಮಸ್ಥರು ತಡೆದು, ತರಾಟೆಗೆ ತೆಗೆದುಕೊಂಡಾಗ ಸಂತವೇರಿ ಸಮೀಪದ ಗೇಮ್ ಫಾರೆಸ್ಟ್ಗೆ ತೆರಳುತ್ತಿದ್ದಂತ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಬಂದದಾರಿಗೆ ಸುಂಕವಿಲ್ಲ ಎಂಬAತೆ ವಾಪಾಸ್ ತೆರಳಿದ್ದಾರೆ.


ಕೋವಿಡ್-19 ಮಾರ್ಗಸೂಚಿ ಕ್ರಮ ಇದ್ದರೂ, ಮೋಜು-ಮಸ್ತಿ ಮಾಡಿದಂತ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕೊರೋನಾ ನಿಯಮ ಉಲ್ಲಂಘನೆ ಅಡಿ ಕಾನೂನು ಕ್ರಮ ಕೈಗೊಳ್ಳುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!