Sunday, June 14, 2026
spot_imgspot_img
spot_imgspot_img

ಸರ್ಕಾರಿ ನಿಧಿ ದುರುಪಯೋಗದ ಆರೋಪ: ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಬಂಧನ

- Advertisement -
- Advertisement -

ಕೊಲಂಬೊ: ಸರ್ಕಾರಿ ನಿಧಿ ದುರುಪಯೋಗದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಶುಕ್ರವಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದೆ.

ಅಧ್ಯಕ್ಷರಾಗಿದ್ದಾಗ ವಿಕ್ರಮಸಿಂಘೆ ಅವರು ಖಾಸಗಿ ವಿದೇಶ ಪ್ರವಾಸಕ್ಕಾಗಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 2023 ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷ್ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ವಿಕ್ರಮಸಿಂಘೆ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು, ಇಂಗ್ಲೆಂಡ್‌ಗೆ ಪ್ರಯಾಣಿಸಲು ಸಾರ್ವಜನಿಕ ಹಣವನ್ನು ಬಳಸಿದ್ದಾರೆ ಎಂದು ವಿಕ್ರಮಸಿಂಘೆ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾವು ಅವರನ್ನು ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುತ್ತಿದ್ದೇವೆ ಎಂದು ಅಧಿಕಾರಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವೈಯಕ್ತಿಕ ಉದ್ದೇಶಗಳಿಗಾಗಿ ರಾಜ್ಯದ ಸಂಪನ್ಮೂಲಗಳನ್ನು ಬಳಸಿದ್ದಕ್ಕಾಗಿ ಅವರ ಮೇಲೆ ಆರೋಪಿಸಲಾಗಿದೆ.

ಪೊಲೀಸರು ಈ ಹಿಂದೆ ಅವರ ಸಿಬ್ಬಂದಿಯನ್ನು ಪ್ರಯಾಣ ವೆಚ್ಚದ ಬಗ್ಗೆ ಪ್ರಶ್ನಿಸಿದ್ದರು. 2023 ರಲ್ಲಿ ಹವಾನಾದಲ್ಲಿ ನಡೆದ ಜಿ77 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಕ್ರಮಸಿಂಘೆ ಅವರು ಲಂಡನ್‌ಗೆ ಹಿಂತಿರುಗುವಾಗ ಅಲ್ಲಿ ತಂಗಿದ್ದರು. ಯುಕೆ ರಾಜಧಾನಿಯಲ್ಲಿ ಅವರು ಮತ್ತು ಅವರ ಪತ್ನಿ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿಕ್ರಮಸಿಂಘೆ ಅವರು ತಮ್ಮ ಪತ್ನಿಯ ಪ್ರಯಾಣ ವೆಚ್ಚವನ್ನು ಅವರೇ ಭರಿಸುತ್ತಿದ್ದರು. ಯಾವುದೇ ರಾಜ್ಯ ನಿಧಿಯನ್ನು ಬಳಸಲಾಗಿಲ್ಲ ಎಂದು ವಾದಿಸಿದ್ದರು. ಆದಾಗ್ಯೂ, ವಿಕ್ರಮಸಿಂಘೆ ಅವರು ಖಾಸಗಿ ಭೇಟಿಗಾಗಿ ಸರ್ಕಾರಿ ಹಣವನ್ನು ಬಳಸಿಕೊಂಡಿದ್ದಾರೆ. ಅವರ ಅಂಗರಕ್ಷಕರಿಗೂ ರಾಜ್ಯದಿಂದ ವೇತನ ನೀಡಲಾಗಿದೆ ಎಂದು ಸಿಐಡಿ ಆರೋಪ ಮಾಡಿದೆ.

- Advertisement -

Related news

error: Content is protected !!