Monday, April 29, 2024
spot_imgspot_img
spot_imgspot_img

ಮಜಿ: ವೀರಕಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಾಕ್ -ಶ್ರವಣದೋಷ ತಪಾಸನ ಹಾಗೂ ಚಿಕಿತ್ಸಾ ಶಿಬಿರ “

- Advertisement -G L Acharya panikkar
- Advertisement -

ಮಜಿ: ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಂಟ್ವಾಳ, ಲಯನ್ಸ್ ಕ್ಲಬ್ ವಿಟ್ಲ, ಕದಳಿ ಮಹಿಳಾ ವೇದಿಕೆ ದಕ್ಷಿಣ ಕನ್ನಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಹಾಗೂ ವಾಕ್ ಮತ್ತು ಶ್ರವಣ ವಿಭಾಗ ಯನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವುಗಳ ಸಹಯೋಗದಲ್ಲಿ “ವಾಕ್ -ಶ್ರವಣದೋಷ ತಪಾಸನ ಹಾಗೂ ಚಿಕಿತ್ಸಾ ಶಿಬಿರ “ವು ದಿನಾಂಕ 8-2- 2024 ನೇ ಗುರುವಾರ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವಿರಕಂಬ ಇಲ್ಲಿ ಬೆಳಿಗ್ಗೆ ಗಂಟೆ 9 ರಿಂದ ಮಧ್ಯಾಹ್ನ ಗಂಟೆ 1ರ ತನಕ ಜರಗಲಿರುವುದು.

ಕಾರ್ಯಕ್ರಮವನ್ನು ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥ ಮಾತ ಡೆವಲಪ್ಪರ್ಸ್ ಸುರತ್ಕಲ್ ನ ಎಂ ಡಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಉದ್ಘಾಟಿಸಲಿದ್ದು, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ್ ಸಿಂಗೇರಿ ಅಧ್ಯಕ್ಷತೆ ವಹಿಸಲಿರುವರು. ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ವಾಕ್ ಮತ್ತು ಶ್ರವಣ ವಿಭಾಗ ಯನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆಯ ಎಚ್ ಒ ಡಿ ಶ್ವೇತ ಪ್ರಭು, ಲಯನ್ಸ್ ಕ್ಲಬ್ ವಿಟ್ಲದ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ, ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಮೊದಲಾದವರ ಗೌರವ ಉಪಸ್ಥಿತರಿರುವರು. ಶಾಲಾ ಮಕ್ಕಳು, ಮಕ್ಕಳ ಪೋಷಕರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ತಿಳಿಸಿರುತ್ತಾರೆ.

- Advertisement -

Related news

error: Content is protected !!