Sunday, October 6, 2024
spot_imgspot_img
spot_imgspot_img

ಕಾಸರಗೋಡು : ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಹಿತ ನಾಲ್ವರು ಅರೆಸ್ಟ್‌

- Advertisement -
- Advertisement -

ಕಾಸರಗೋಡು: ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಹಿತ ನಾಲ್ವರನ್ನು ಮಂಜೇಶ್ವ ಠಾಣಾ ಪೊಲೀಸರು ಬಂಧಿಸಿದ ಗಟನೆ ವರದಿಯಾಗಿದೆ. ಆರೋಪಿಗಳಿಂದ 29.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ವಶಪಡಿಸಿ ಕೊಳ್ಳಲಾಗಿದೆ.

ಬಂಧಿತರನ್ನು ಬಳ್ಳೂರಿನ ಮುಹಮ್ಮದ್ ಅಶ್ರಫ್ (21), ಕೊಡಿಬೈಲ್‌ನ ಸಯ್ಯದ್ ನವಾಝ್ ( 30), ಬೆಳ್ಳೂರಿನ ಅಹಮ್ಮದ್ ಶಮ್ಮಾಸ್ (20) ಮತ್ತು ಬಂಟ್ವಾಳದ ಮುಹಮ್ಮದ್ ಇಸಾಕ್ (20) ಎಂದು ಗುರುತಿಸಲಾಗಿದೆ.

ಪೈವಳಿಕೆ ಬಾಯಿ ಕಟ್ಟೆ ಯಿಂದ ಈ ನಾಲ್ವರನ್ನು ಬಂಧಿಸಿದ್ದು, ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಮೇಲ್ನೋಟದಲ್ಲಿ ಡಿವೈಎಸ್ಪಿಪಿ. ಸುನಿಲ್ ಕುಮಾರ್ ಹಾಗೂ ಮಂಜೇಶ್ವರ ಠಾಣಾ ಸಬ್ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

- Advertisement -

Related news

error: Content is protected !!