Sunday, June 29, 2025
spot_imgspot_img
spot_imgspot_img

4 ಆಸ್ಪತ್ರೆಗಳ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು..! ಬೆಚ್ಚಿಬೀಳಿಸಿದ ಅಂಡಾಣು ಮಾರಾಟ ಜಾಲ

- Advertisement -
- Advertisement -

ಇತ್ತೀಚಿಗಿನ ದಿನಗಳಲ್ಲಿ ಬಾಡಿಗೆ ತಾಯ್ತನ, ಬೇರೆಯವರ ಅಂಡಾಣು, ವೀರ್ಯಾಣು ತೆಗೆದು ಗರ್ಭಧಾರಣೆ ಮಾಡುವ ತಂತ್ರಜ್ಞಾನ ಮುಂದುವರಿದಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿದ ಕೆಲ ಆಸ್ಪತ್ರೆಗಳನ್ನು ಪತ್ತೆ ಹಚ್ಚಿದ ಆರೋಗ್ಯ ಇಲಾಖೆ ಬೀಗ ಜಡಿದು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಘಟನೆ ನೆರೆರಾಜ್ಯ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನಲ್ಲಿ ಅಂಡಾಣು ಮಾರಾಟ ಜಾಲ ಪತ್ತೆ ಹಚ್ಚಿದ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ನಾಲ್ಕು ಆಸ್ಪತ್ರೆಗಳಿಗೆ ಬೀಗ ಜಡಿದಿದ್ದಾರೆ . ಅಂಡಾಣು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು, ಈ ಆಸ್ಪತ್ರೆಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

18 ರಿಂದ 20 ವಯಸ್ಸಿನ ಯುವತಿಯರ ಅಂಡಾಣುವನ್ನು ಶೇಖರಿಸಿ ಮಾರಾಟ ಮಾಡಲಾಗುತ್ತಿತ್ತು. ಇದರಲ್ಲಿ 16 ವರ್ಷ ವಯಸ್ಸಿನವರೂ ಹೆಚ್ಚಿನವರಿದ್ದಾರೆ ಎನ್ನಲಾಗಿದೆ.

ಇನ್ನು ಈ ಕುರಿತು ಮಾಹಿತಿ ನೀಡಿರುವ ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಅವರು, ಅಂಡಾಣು ಶೇಖರಿಸಿ ಮಾರಾಟ ಮಾಡುತ್ತಿದ್ದರಿಂದ ನಾಲ್ಕು ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಈ ಆಸ್ಪತ್ರೆಗಳ ವಿರುದ್ಧ ಆರೋಪ ಸಾಬೀತಾದಲ್ಲಿ 50 ಲಕ್ಷ ರೂ. ದಂಡ ಹಾಗೂ ಭಾಗಿಯಾದ ವೈದ್ಯರಿಗೂ ಸಹ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!