Sunday, June 29, 2025
spot_imgspot_img
spot_imgspot_img

ಬಂಟ್ವಾಳ: ಸ್ನೇಹಿತನ ಹೆಂಡತಿಗೆ ಮದುವೆ ಭರವಸೆ ನೀಡಿ ವಂಚನೆ

- Advertisement -
- Advertisement -

ಬಂಟ್ವಾಳ: ಮಹಿಳೆಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಆ ಬಳಿಕ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೊರೆಟ್ಟೊ ನಿವಾಸಿ ಅಬ್ದುಲ್ ಅಜೀಜ್ ಅವರ ಪತ್ನಿ ಅನೀಶಾ ಬಾನು(39) ಅವರಿಗೆ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಅತ್ಯಾಚಾರ ಎಸಗುವುದರ ಜೊತೆಗೆ ಕೊಲೆ ಬೆದರಿಕೆ ಹಾಕಿರುತ್ತಾನೆ.

ಆರೋಪಿ ತಸ್ಲೀಂ ಆರೀಫ ದೂರುದಾರ ಮಹಿಳೆ ಅನೀಶಾ ಬಾನು ಅವರ ಪತಿ ಅಬ್ದುಲ್ ಅಜೀಜ್ ಅವರ ಸ್ನೇಹಿತನೇ ಆಗಿದ್ದು, ಆಗಾಗ ಪತಿಯೊಂದಿಗೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಬಳಿಕ ಆರೋಪಿ ಹಾಗೂ ಅನೀಶಾ ಬಾನು ನಡುವೆ ಸಲುಗೆ ಉಂಟಾಗಿ ಮೊಬೈಲ್ ನಂಬರ್ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಕೊನೆಗೆ ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಸುಳ್ಳು ಹೇಳಿಕೊಂಡು ಹಲವಾರು ಬಾರಿ ದೈಹಿಕ ಸಂರ್ಪಕ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸ್ನೇಹಿತ ಹಾಗೂ ಹೆಂಡತಿಯ ವಿಷಯ ತಿಳಿದ ಪತಿ ಅಬ್ದುಲ್ ಅಜೀಜ್ ಅವಳಿಂದ ದೂರಾಗಿದ್ದ. ಬಳಿಕ ಆರೋಪಿಯೊಂದಿಗೆ ಆಯಿಶಾ ಬಾನು ಬಾಡಿಗೆ ಮನೆಯಲ್ಲಿ ವಾಸವಾಗಿದ್ಧಳು. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಆಯಿಶಾಳ ಮುಖ, ಬಾಯಿಗೆ ಹೊಡೆದು, ಸೊಂಟಕ್ಕೆ ಒದ್ದಿರುವುದಲ್ಲದೆ, ತಲೆ ಕೂದಲನ್ನು ಎಳೆದು ಅವ್ಯಾಚ ಶಬ್ದಗಳಿಂದ ಬೈದಿದ್ದಾನೆ. ಜೊತೆಗೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿದ್ದಾನೆ ಎಂದು ಆಯಿಶಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!