Sunday, May 19, 2024
spot_imgspot_img
spot_imgspot_img

ಸಮಾಜ ಸೇವಾ ಸಮಿತಿ ಮತ್ತು ಸೇವಾದಳ ಬಂಟರ ಸಂಘ ಬೆಂಗಳೂರು ವತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಕೋವಿಡ್-19 ಉಚಿತ ಲಸಿಕಾ ಅಭಿಯಾನ

- Advertisement -G L Acharya panikkar
- Advertisement -

ಬೆಂಗಳೂರು: ಕೋವಿಡ್ -19 ಎಂಬ ತುರ್ತು ಪರಿಸ್ಥಿಯಲ್ಲಿ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದರೆ ಮಾತ್ರ ಈ ಸಾಂಕ್ರಾಮಿಕ ರೋಗವನ್ನು ಆದಷ್ಟು ಬೇಗ ನಿರ್ಮೂಲನೆ ಮಾಡಬಹುದು. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಕೂಡ.

ಈ ನಿಟ್ಟಿನಲ್ಲಿ ಬೆಂಗಳೂರು ಬಂಟರ ಸಂಘ ಹಾಗೂ ಇದರ ಸಮಾಜ ಸೇವಾ ಸಮಿತಿ ಮತ್ತು ಸೇವಾದಳ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಉಚಿತ ಲಸಿಕಾ ಅಭಿಯಾನವನ್ನು(ಎರಡೂ ಹಂತದ ಡೋಸ್) ಏಪ್ರಿಲ್ 26 ಸೋಮವಾರದಿಂದ ನಿರಂತರವಾಗಿ ಬೆಳಗ್ಗೆ 09:30 ಗಂಟೆಯಿಂದ ಸಂಜೆ 03:00 ಗಂಟೆಯವರೆಗೆ ಬೆಂಗಳೂರು ಬಂಟರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ತಾವೆಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ಆತ್ಮೀಯ ಬಳಗದ, ಸುತ್ತಮುತ್ತಲಿನ 45 ವರ್ಷ ಮೇಲ್ಪಟ್ಟ ನಾಗರಿಕರನ್ನು ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕೆಂದು ಬೆಂಗಳೂರು ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ.

ಮಾಹಿತಿಗಾಗಿ:

1) ಲಸಿಕೆ ತೆಗೆದುಕೊಳ್ಳುವವರು ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ತರಬೇಕು
2) ಲಸಿಕೆ ಹಾಕಿಸಿಕೊಳ್ಳುವವರು ಮೊದಲೇ ತಮ್ಮ ಹೆಸರನ್ನು ಕೆಳಗೆ ತಿಳಿಸಿದ ನಂಬರ್ ನಲ್ಲಿ ನೊಂದಾಯಿಸಿಕ್ಕೊಳ್ಳಬಹುದು
3) ಎರಡೂ ಹಂತದ (ಮೊದಲನೇ ಹಾಗೂ ಎರಡನೇ) ಲಸಿಕೆಯನ್ನು ಹಾಕಲಾಗುವುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9845025921 / 9008973945 / 9740923868 / 8970720484 / 9845340969 / 9663977388

driving
- Advertisement -

Related news

error: Content is protected !!