Friday, March 29, 2024
spot_imgspot_img
spot_imgspot_img

ಎಫ್ ಟಿ ಎಫ್ ಕ್ರಿಯಾ ಯೋಜನೆಯಲ್ಲಿ ಪಾಕಿಸ್ತಾನ ವಿಫಲ

- Advertisement -G L Acharya panikkar
- Advertisement -

ನವದೆಹಲಿ: ಗ್ಲೋಬಲ್ ವಾಚ್‌ ಡಾಗ್ ಸಿದ್ಧಪಡಿಸಿರುವ ಹಣಕಾಸು ಕ್ರಿಯಾಯೋಜನೆಯ(ಎಫ್‌ಎಟಿಎಫ್‌) 27 ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಬೂದು ಪಟ್ಟಿಯಲ್ಲೇ ಉಳಿದಿದೆ ಎಂದು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.


ಮೊಟ್ಟ ಮೊದಲ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮಾರ್ಕಸ್ ಪ್ಲೇಯರ್, ಪಾಕಿಸ್ತಾನವು 27 ಅಂಶಗಳ ಪೈಕಿ 21 ಅಂಶಗಳನ್ನು ಪೂರ್ಣಗೊಳಿಸಿದ್ದು 6 ಅಂಶಗಳ ಬಗ್ಗೆ ಕೈಗೊಂಡ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದರು. ಪಾಕಿಸ್ತಾನದ ನಡೆ ಬಗ್ಗೆ ಇನ್ನೊಮ್ಮೆ ಯೋಚಿಸುವಂತೆ ಟರ್ಕಿ ಎಫ್‌ಎಟಿಎಫ್ ಸಭೆಯಲ್ಲಿ ಪ್ರತಿಪಾದಿಸಿ, ಪಾಕಿಸ್ತಾನಕ್ಕೆ ಬೆಂಬಲಿಸಿದ್ದು, ವ್ಯರ್ಥವಾಯಿತು. ಚೀನಾ, ಮಲೇಷಿಯಾ, ಸೌದಿ ಅರೇಬಿಯಾ ಸೇರಿದಂತೆ ಸದಸ್ಯ ರಾಷ್ಟ್ರಗಳ ಪೈಕಿ 38 ಸದಸ್ಯರಲ್ಲಿ ಯಾರಿಗೂ ಟರ್ಕಿ ಪ್ರಸ್ತಾವನೆ ಒಪ್ಪಿಗೆಯಾಗಲಿಲ್ಲ. ಮುಂದಿನ ಸಭೆಯನ್ನು ಫೆಬ್ರವರಿ 2021ರಂದು ನಡೆಸಲು ನಿರ್ಣಯಿಸಲಾಯಿತು.


ಎಫ್‌ಎಟಿಎಫ್‌ ಪಾಕಿಸ್ತಾನವನ್ನು ಜೂನ್ 2018ರಲ್ಲಿ ಬೂದು ಪಟ್ಟಿಗೆ ಸೇರಿಸಿತ್ತು. 2019ರೊಳಗೆ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆಯನ್ನು ನಿಯಂತ್ರಿಸುವಂತೆ ಸೂಚಿಸಿತ್ತು. ಆದರೆ, ಕೋವಿಡ್‌ 19 ಸಾಂಕ್ರಾಮಿಕ ರೋಗದ ಕಾರಣದಿಂದ ಪಾಕಿಸ್ತಾನಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಿತ್ತು. ಮುಂದಿನ ವರ್ಷದ ಜೂನ್ ವೇಳೆಗೆ ಎಫ್‌ಎಟಿಎಫ್‌ನ (FATF) ಗ್ರೇ ಪಟ್ಟಿಯಿಂದ ನಿರ್ಗಮಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಲಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು.

- Advertisement -

Related news

error: Content is protected !!