- Advertisement -
- Advertisement -


ಪುತ್ತೂರು: ವಿಶ್ವದ ಅತೀ ದೊಡ್ಡ ಐಟಿ ಎಜುಕೇಷನ್ ನೆಟ್ವರ್ಕ್ ಸಂಸ್ಥೆ ಜಿ-ಟೆಕ್ ಕಂಪ್ಯೂಟರ್ ಆ. 24 ನೇ ಶನಿವಾರ ದರ್ಬೆ ಪ್ರೀತಿ ಆರ್ಕೆಡ್ ನಲ್ಲಿ ಶುಭಾರಂಭಗೊಳ್ಳಲಿದೆ.

22 ದೇಶಗಳಲ್ಲಿ 800 ಕ್ಕೂ ಅಧಿಕ ಗುಣಮಟ್ಟದ ತರಭೇತಿ ಕೇಂದ್ರಗಳೊಂದಿಗೆ ಐ.ಎಸ್.ಒ ಪ್ರಾಮಾಣಿಕೃತ ಶಿಕ್ಷಣ ಸಂಸ್ಥೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನ್ಹಸ್ ಆಶೀರ್ವಚನ ನೀಡಲಿದ್ದಾರೆ.
ಪುತ್ತೂರು ಸಂತ ಫಿಲೋಮೀನಾ ಕಾಲೇಜಿನ ಪ್ರಾಂಶುಪಾಲರು ವಂ| ಡಾ. ಆಂಟನಿ ಪ್ರಕಾಶ್ ಮೊಂತೆರೋ, ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಭಾಗ ಮುಖ್ಯಸ್ಥರು ಪ್ರೊ. ವಿನಯ ಚಂದ್ರ, ಅಕ್ಷಯ ಕಾಲೇಜಿನ ಚೇರ್ ಮೆನ್ ಜಯಂತ ನಡುಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿ.ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಪುತ್ತೂರು ವಿಭಾಗ ನಿರ್ದೇಶಕರು ಸಂತೋಷ್ ಕ್ರಾಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -