ಸುಬ್ರಹ್ಮಣ್ಯ : ಭಾರಿ ಗಾಳಿ ಮಳೆಗೆ ಮನೆಯೊಂದರ ಮೇಲ್ಛಾವಣಿ ಹಾನಿಯಾಗಿ ಸಂಪೂರ್ಣ ಧರಾಶಾಹಿಯಾದ ಘಟನೆ ಕಳೆದ ಶನಿವಾರದಂದು ನಡೆದಿದೆ .ಕಡಬ ತಾಲೂಕಿನ ಮುರುಳ್ಯ ಸಮೀಪದ ಬೆಂಗನಡ್ಕ ರೈಲ್ವೆ ಉದ್ಯೋಗಿ ಹರಿಕೃಷ್ಣ ಎಂಬುವರ ಮನೆಯ ಮೇಲ್ಛಾವಣಿ ಧರಾಶಾಹಿಯಾಗಿ 30000 ದಷ್ಟು ನಷ್ಟ ಸಂಭವಿಸಿದೆ .ಸ್ಥಳಕ್ಕೆ ಸ್ಥಳೀಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಗ್ರಹಣ ಬಳಿಕ ಮಧ್ಯಾಹ್ನದಿಂದ ನಿರಂತರವಾಗಿ ಮಳೆಯಾಗಿದೆ.ಸುಬ್ರಹ್ಮಣ್ಯ ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾನುವಾರ ಭಾರಿ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಸುಬ್ರಹ್ಮಣ್ಯ ಹಾಗೂ ಕುಮಾರ ಪರ್ವತ ಭಾಗದಲ್ಲಿ ಗಾಳಿ ಮಳೆಯಾಗಿದೆ. ನಿರ೦ತರ ಸುರಿದ ಮಳೆಯಿಂದಾಗಿ ಕುಮಾರಧಾರ ಹಾಗೂ ದರ್ಪಣ ತೀರ್ಥ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಮಟ್ಟಿಗೆ ಹೆಚ್ಚಳವಾಯಿತು. ಸುಬ್ರಹ್ಮಣ್ಯ ಪ್ರದೇಶದ ಸುತ್ತಮುತ್ತಲಿನ ಸಣ್ಣಪುಟ್ಟ ನದಿ, ತೊರೆ,ಹಳ್ಳ ಗಳು ಕೂಡ ಮಳೆ ನೀರಿನಿಂದ ತುಂಬಿ ಹರಿಯಿತು. ಕಳೆದ ಕೆಲವು ದಿನಗಳಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು .ಆದರೆ ಬಾನುವಾರ ಮಾತ್ರ ಬಾರಿ ಮಳೆಯಾಯಿತು. ಮಳೆಯ ಅವಾಂತರಕೆ ಯಾವುದೇ ಅವಘಡಗಳು ಸಂಭವಿಸಿಲ.

