Monday, July 22, 2024
spot_imgspot_img
spot_imgspot_img

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಕಬಕ: ಸ್ಕೂಟರ್‌ವೊಂದರಲ್ಲಿ ಬಂದು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿಯೊಬ್ಬನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಲ್ಲದೆ ಆತನ ವಶದಲ್ಲಿದ್ದ 1.70 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿರುವ ಘಟನೆ ಕಬಕದಲ್ಲಿ ನಡೆದಿದೆ.

ಕಬಕ ನಿವಾಸಿ ಮಹಮ್ಮದ್ ರಫೀಕ್ ಯಾನೆ ಗುಜುರಿ ಮುನ್ನಾ ರವರು ಬಂಧಿತ ಆರೋಪಿ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮತ್ತು ಡಿವೈಎಸ್ಪಿ ದಿನಕರ್ ಶೆಟ್ಟಿಯವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರ ಸೂಚನೆಯಂತೆ ಎಸ್.ಐ ಜಂಜುರಾಜ್ ಮಹಾಜನ್ ಅವರು ಆ.6ರಂದು ಕಬಕ ಗ್ರಾಮದ ವಿದ್ಯಾಪುರ ರೈಲ್ವೇ ಬ್ರಿಡ್ಜ್ ಸಮೀಪ ಆಕ್ಟೀವಾ ಸ್ಕೂಟರ್‌ವೊಂದರಲ್ಲಿ ಗಾಂಜಾ ತಂದು ಮಾರಾಟಕ್ಕೆ ಯತ್ನಿಸಿರುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು. ಪೊಲೀಸರು ಬರುತ್ತಿರುವುನ್ನು ಗಮನಿಸಿ ಆರೋಪಿ ಮಹಮ್ಮದ್ ರಫೀಕ್ ಅವರು ಪರಾರಿಯಾಗಲು ಯತ್ನಿಸುತ್ತಿದ್ದಂತೆ ಪೊಲೀಸರು ಆತನನ್ನು ಸುತ್ತುವರಿದು ಆತನ ಕೈಯಲ್ಲಿದ್ದ ಒಂದು ಪ್ಯಾಕೆಟ್ ಗಾಂಜಾ ಮತ್ತು ಆಕ್ಟೀವಾ ಸ್ಕೂಟರ್ ಸೀಟ್‌ಕೆಳಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟ ಗಾಂಜಾಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಒಟ್ಟು ರೂ. 21ಸಾವಿರ ಮೌಲ್ಯದ 1.70ಕೆ.ಜಿ ಗಾಂಜಾ ಮತ್ತು ಗಾಂಜಾ ಮಾರಾಟದಿಂದ ದೊರೆತ ರೂ. 2ಸಾವಿರ ಮತ್ತು ರೂ. 1ಸಾವಿರ ಮೌಲ್ಯದ ಒಂದು ಮೊಬೈಲ್, ರೂ. 35ಸಾವಿರ ಮೌಲ್ಯದ ಕೃತ್ಯಕ್ಕೆ ಬಳಸಿದ್ದ ಆಕ್ಟೀವಾ ಸ್ಕೂಟರ್ ಅನ್ನು ಆರೋಪಿಯಿಂದ ವಶಕ್ಕೆ ಪಡೆದು ಕೊಳ್ಳಲಾಗಿದೆ. ಎಸ್.ಐ ಜಂಬುರಾಜ್ ನೇತೃತ್ವದ ಕಾರ್ಯಾಚರಣೆಯಲ್ಲಿ ಕಾನ್‌ಸ್ಟೇಬಲ್‌ಗಳಾದ ಕಿರಣ್, ನಾಗೇಶ್, ನಗರಾಜ್, ಶ್ರೀಶೈಲ ಅವರು ಭಾಗವಹಿಸಿದ್ದರು.

- Advertisement -

Related news

error: Content is protected !!