Sunday, July 19, 2026
spot_imgspot_img
spot_imgspot_img

ಇಂಡಿಗೊ ವಿಮಾನದಲ್ಲಿ ಪ್ರಯಾಣಿಕರೋರ್ವರ ಪವ‌ರ್ ಬ್ಯಾಂಕ್‌ಗೆ ಹತ್ತಿಕೊಂಡ ಬೆಂಕಿ; ಪ್ರಯಾಣಿಕರ ತೆರವು

- Advertisement -
- Advertisement -

ಇಂಡಿಗೊ ವಿಮಾನದಲ್ಲಿ ಪ್ರಯಾಣಿಕರೋರ್ವರ ಪವ‌ರ್ ಬ್ಯಾಂಕ್‌ಗೆ ಹತ್ತಿಕೊಂಡ ಬೆಂಕಿ; ಪ್ರಯಾಣಿಕರ ತೆರವು

ಚಂಡಿಗಢ: ಹೈದರಾಬಾದ್-ಚಂಡಿಗಢ ನಡುವೆ ಸಂಚರಿಸುವ ಇಂಡಿಗೊ ವಿಮಾನ ಶಹೀದ್ ಭಗತ್‌ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಅಪರಾಹ್ನ ನಿಂತಿದ್ದ ಸಂದರ್ಭ ಪ್ರಯಾಣಿಕರೋರ್ವರ ಬ್ಯಾಗ್‌ನಲ್ಲಿ ಇದ್ದ ಪವ‌ರ್ ಬ್ಯಾಂಕ್‌ಗೆ ಬೆಂಕಿ ಹತ್ತಿಕೊಂಡ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಸುಮಾರು 198 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು.

ವಿಮಾನವು ಸುರಕ್ಷಿತವಾಗಿ ಇಳಿದ ನಂತರ ವಿಮಾನ ನಿಲ್ದಾಣದ ನಿಲುಗಡೆ ಪ್ರದೇಶದಲ್ಲಿ ನಿಂತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.39 ಸಿ ಸಂಖ್ಯೆಯ ಆಸನದಲ್ಲಿದ್ದ ಪ್ರಯಾಣಿಕ ಬೆಂಕಿ ಹತ್ತಿಕೊಂಡಿರುವ ಬಗ್ಗೆ ವರದಿ ಮಾಡಿದ ಬಳಿಕ ಸಿಬ್ಬಂದಿ ಅಗ್ನಿ ಶಾಮಕವನ್ನು ಬಳಸಿ ಬೆಂಕಿ ನಂದಿಸಿದರು. ಬಳಿಕ ತುರ್ತು ಪರಿಸ್ಥಿತಿ ಘೋಷಿಸಿದರು.

ತುರ್ತು ಬಾಗಿಲನ್ನು ತೆರೆದರು ಮತ್ತು ಸೈಡ್ಸ್‌ಗಳನ್ನು ಬಳಸಿ ಪ್ರಯಾಣಿಕರನ್ನು ತೆರವುಗೊಳಿಸಿದರು. ಈ ಸಂದರ್ಭ ಸುಮಾರು 5 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

- Advertisement -

Related news

error: Content is protected !!