ರೈಲಿನಲ್ಲಿ ಬಿಟ್ಟುಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳಿದ್ದ ಚೀಲವನ್ನು ನೈಋತ್ಯ ರೈಲ್ವೆ ತಂಡ ಯಶಸ್ವಿಯಾಗಿ ವಶಪಡಿಸಿಕೊಂಡು ಅದರ ಮಾಲಿಕರಿಗೆ ಹಿಂದಿರಿಗಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ರೈಲು ಸಂಖ್ಯೆ 16580 ಶಿವಮೊಗ್ಗ-ಯಶವಂತಪುರ ರೈಲಿನಲ್ಲಿ ಬಿಟ್ಟಿದ್ದ ಸುಮಾರು 5.4 ಲಕ್ಷ ರೂ.ಮೌಲ್ಯದ ಚಿನ್ನದ ಆಭರಣಗಳಿದ್ದ ಚೀಲವನ್ನು ನೈಋತ್ಯ ರೈಲ್ವೆ ತಂಡ ಯಶಸ್ವಿಯಾಗಿ ವಶಪಡಿಸಿಕೊಂಡು ಅದರ ಮಾಲಿಕರಿಗೆ ವಾಪಸ್ ಹಿಂದಿರಿಗಿಸಿದೆ.
ತುಮಕೂರು ಹೊರಠಾಣೆಯಿಂದ ಚೀಲ ಕಾಣೆಯಾದ ಬಗ್ಗೆ ಮಾಹಿತಿ ಪಡೆದ ರೈಲ್ವೆ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು. ಯಶವಂತಪುರ ನಿಲ್ದಾಣದಲ್ಲಿ ರೈಲಿನ ಹಿಂಭಾಗದ ಸಾಮಾನ್ಯ ಬೋಗಿಯಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಪತ್ತೆಯಾದ ಬ್ಯಾಗ್ ನ್ನು ಅಧಿಕಾರಿಗಳು ಪರಿಶೀಲಿಸಿದ್ದು,
ಅದರಲ್ಲಿ ಸುಮಾರು 5.4 ಲಕ್ಷ ರೂ.ಮೌಲ್ಯದ ಚಿನ್ನದ ಆಭರಣವಿತ್ತು.ವಶಪಡಿಸಿಕೊಂಡ ವಸ್ತುಗಳ ಸಮಗ್ರ ಪರಿಶೀಲನೆ ಮತ್ತು ದಾಖಲಾತಿ ಪ್ರಕ್ರಿಯೆಯ ನಂತರ, ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಅನುಸರಿಸಿ ಬೆಲೆಬಾಳುವ ವಸ್ತುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಪ್ರಯಾಣಿಕರ ತಮ್ಮ ಬೆಲೆಬಾಳುವ ವಸ್ತುಗಳನ್ನು ಮರಳಿ ಪಡೆಯುವಲ್ಲಿ ಮತ್ತು ಹಿಂದಿರುಗಿಸುವಲ್ಲಿ ತ್ವರಿತ ಕ್ರಮ ಕೈಗೊಂಡ ಜಾಗರೂಕ ರೈಲ್ವೆ ಸಿಬ್ಬಂದಿಗೆ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.