*ದಾಖಲೆ ನಿರ್ಮಿಸಿದ ಚಿನ್ನದ ದರ..!
*ಬೆಳ್ಳಿ ದರದಲ್ಲೂ ಭಾರೀ ಏರಿಕೆ..!
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ಕೊರೊನಾದಿಂದಾಗಿ ಆರ್ಥಿಕ ತೆ ಕುಸಿದಿದೆ. ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಈ ನಡುವೆ ಬಂಗಾರದ ಬೆಲೆ ಮಾತ್ರ ಗಗನಕ್ಕೇರುತ್ತಿದೆ. ಇದೇ ಮೊದಲ ಬಾರಿ 10 ಗ್ರಾಂ ಚಿನ್ನದ ಬೆಲೆ 50 ಸಾವಿರ ರೂ.ಗಡಿ ದಾಟಿದ್ದು, ದಾಖಲೆ ಬರೆದಿದೆ. 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 5157 ರೂ.ಆಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಬೆಳ್ಳಿ ದರದಲ್ಲೂ ಭಾರೀ ಏರಿಕೆ..!
ಮತ್ತೊಂದುಕಡೆ ಬೆಳ್ಳಿ ದರ ಕೂಡ ಭಾರೀ ಜಿಗಿತ ಕಂಡಿದ್ದು, ಹೊಸ ದಾಖಲೆಯಾಗಿದೆ. ಒಂದು ಕೆ.ಜಿ ಬೆಳ್ಳಿ ದರ 61 ಸಾವಿರ ಗಡಿ ದಾಟಿದೆ. 24 ಕ್ಯಾರೆಟ್ ಗೋಲ್ಡ್ ಹೂಡಿಕೆದಾರರ ಕೈಯಲ್ಲಿರುವ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆಯಾಗುತ್ತಿದೆ. ಇದರಿಂದ ಬಂಗಾರದ ದರ ಏರಿಕೆಯಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಭಾರೀ ಏರಿಕೆಯಾಗುವುದಲ್ಲಿ ಯಾವುದೇ ಅಚ್ಚರಿ ಇಲ್ಲ.