Sunday, June 14, 2026
spot_imgspot_img
spot_imgspot_img

ಗ್ರಾಹಕರಿಗೊಂದು ಸಂತಸದ ಸುದ್ದಿ; ಪ್ರತಿ ಲೀ. ಪೆಟ್ರೋಲ್‌ ಮೇಲೆ 1ರೂ. ಕಡಿತ

- Advertisement -
- Advertisement -

ವಿಟ್ಲ: ಪೆಟ್ರೋಲ್‌, ಡಿಸೇಲ್‌ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಬೇಸತ್ತು ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕರಾವಳಿಯ ಕೆಲವು ಪೆಟ್ರೋಲ್‌ ಬಂಕ್‌ಗಳು ಗ್ರಾಹಕರಿಗೊಂದು ಸಂತಸದ ಸುದ್ದಿ ತಂದಿದೆ.

ವಿಟ್ಲದ ಉರಿಮಜಲು ಹಾಗೂ ಕುದ್ದುಪದವುನಲ್ಲಿ ಕಾರ್ಯಾಚರಿಸುತ್ತಿರುವ ESSAR NAYARA ಪೆಟ್ರೋಲ್‌ ಬಂಕ್‌ನಲ್ಲಿ ಮಾರುಕಟ್ಟೆ ದರಕ್ಕಿಂತ ಪ್ರತಿ ಲೀ. ಪೆಟ್ರೋಲ್‌ ಮೇಲೆ 1ರೂ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದೇ ರೀತಿ ESSAR NAYARA ಶಾಖೆಗಳಾದ ಪುತ್ತೂರಿನ ಮುಕ್ವೆ , ಈಶ್ವರಮಂಗಿಲದ ಗಾಳಿಮುಖ, ಕಲ್ಲಡ್ಕ , ಬೆಳ್ಳಾರೆ, ಆರಂತೋಡು ಪೆಟ್ರೋಲ್‌ ಬಂಕ್‌ನಲ್ಲಿಯೂ 1ರೂ. ಕಡಿಮೆ ದರದಲ್ಲಿ ಪೆಟ್ರೋಲ್‌ ಮಾರಾಟವಾಗುತ್ತಿದೆ.

ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!