Sunday, May 19, 2024
spot_imgspot_img
spot_imgspot_img

ಬಹುಪಯೋಗಿ ಕಡಲೇಹಿಟ್ಟಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು..!

- Advertisement -G L Acharya panikkar
- Advertisement -

ಕಡಲೆಹಿಟ್ಟು..! ಅಡುಗೆಯಿಂದ ಹಿಡಿದು ಸೌಂದರ್ಯದವರೆಗೆ ಕಡಲೆಹಿಟ್ಟನ್ನು ಬಳಸುತ್ತಾರೆ. ಸೌಂದರ್ಯವರ್ಧಕವಾಗಿ ಕಾರ್ಯನಿರ್ವಹಿಸುವ ಕಡಲೆ ಹಿಟ್ಟಿನಲ್ಲಿ ಆರೋಗ್ಯದ ಗುಟ್ಟು ಅಡಗಿದೆ.

ಹೃದಯದ ಆರೋಗ್ಯಕ್ಕೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದಕ್ಕೆ ಕಡಲೆಹಿಟ್ಟು ಸಹಾಯಕಾರಿಯಂತೆ. ಕಡಲೇ ಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವಿಸುವುದರಿಂದ ಮಧುಮೇಹ ಕೂಡ ನಿಯಂತ್ರಣಕ್ಕೆ ತರಬಹುದೆಂದು ಸಂಶೋಧನೆ ತಿಳಿಸಿದೆ. ಇದರಲ್ಲಿ ನಾರಿನಾಂಶ ಜಾಸ್ತಿ ಇದ್ದು ಕಡಲೆಹಿಟ್ಟಿನಿಂದ ಮಾಡಿದ ಆಹಾರ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ತೂಕ ಇಳಿಸಿಕೊಳ್ಳುವವರಿಗೆ ಕೂಡ ಕಡಲೇಹಿಟ್ಟು ವರದಾನವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇದೆ. ಪ್ರೋಟಿನ್ ಹೇರಳವಾಗಿದೆ. ವರ್ಕ್ ಔಟ್ ನಂತರ ಇದರಿಂದ ಮಾಡಿದ ಸ್ಮೂಥಿಯನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ಸೋಪು, ಫೇಸ್ ವಾಶ್ ಬದಲು ಕಡಲೇ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಮೊಡವೆ, ಕಲೆ ಚುಕ್ಕಿಗಳ ಸಮಸ್ಯೆಯಿಂದ ಪಾರಾಗಬಹುದು. ಆಗಾಗ ಮುಖಕ್ಕೆ ಕಡಲೇ ಹಿಟ್ಟಿನ ಪ್ಯಾಕ್ ಹಚ್ಚಿಕೊಳ್ಳುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ. ಇನ್ನು ಕಡಲೇಹಿಟ್ಟಿಗೆ ಮೊಟ್ಟೆ, ಎಸೆನ್ಸಿಯಲ್ ಆಯಿಲ್, ಸ್ವಲ್ಪ ಹಾಲು ಸೇರಿಸಿ ಮಿಶ್ರಣ ಮಾಡಿಕೊಂಡು ಇದನ್ನು ಹೇರ್ ಪ್ಯಾಕ್ ರೀತಿ ಹಚ್ಚಿಕೊಂಡರೆ ಹೊಳೆಯುವ ಕೂದಲು ನಿಮ್ಮದಾಗುತ್ತದೆ.

- Advertisement -

Related news

error: Content is protected !!