ವಿಟ್ಲದ ಜನತೆಗೆ ಪರಿಚಯಿಸುತ್ತಿದೆ ಪ್ರಸಿದ್ಧ ಬ್ರಾಂಡ್ ಗಳ ಬೃಹತ್ ಕಲೆಕ್ಷನ್ ಗಳನ್ನೂಳಗೊಂಡ ವಿವಿಧ ವಿನ್ಯಾಸದ ಉಡುಪುಗಳು
ವಿಟ್ಲ: ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕೀರ್ಣದ 2ನೇ ಮಹಡಿಯಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಪ್ರಭಾಕರ್ ಭಟ್ ಕಲ್ಲಡ್ಕ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ನೂತನ ಡ್ರೆಸ್ ಮಳಿಗೆಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕರುಣಾಕರ ಗೌಡ ನಾಯ್ತೊಟ್ಟು ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ, ಮೊಹಮ್ಮದ್ ಹನೀಫ್ ಮಾಲಕರು ಗ್ರೀನ್ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್, ಸಂಜೀವ ಪೂಜಾರಿ ಕೂಚಿಗುಡ್ಡೆ ಅಧ್ಯಕ್ಷರು ಮೂರ್ತೆದಾರರ ಸಹಕಾರಿ ಸಂಘ ಸಜಿಪ, ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷರು ಬ್ರಾಹ್ಮಶ್ರೀ ವಿವಿದೊದ್ದೇಶ ಸಹಕಾರಿ ಸಂಘ, ಉದಯ್ ಕುಮಾರ್ ರೈ ಅಗ್ರಿ, ಸಂತೋಷ್ ಕುಮಾರ್ ಇರಂತಬೆಟ್ಟು, ಅಧ್ಯಕ್ಷರು ನರಿಕೊಂಬು ಗ್ರಾಮ ಪಂಚಾಯತ್, ಕೃಷ್ಣಯ್ಯ ವಿಟ್ಲ ಅರಮನೆ, ಲಕ್ಷ್ಮಣ ಪೂಜಾರಿ ಪ್ರಧಾನ ಕಾರ್ಯದರ್ಶಿ ಬಿಲ್ಲವ ಸಂಘ, ರಮೇಶ್ ಆರ್ ಎಸ್ ಮಾಲಕರು ಆರ್ ಎಸ್ ಫರ್ನಿಚರ್ & ಇಲೆಕ್ಟ್ರಾನಿಕ್ ವಿಟ್ಲ,ಎಂ ಹೆಚ್ ಮೊಹಮ್ಮದ್ ಗ್ರೀನ್ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್, ವಿಠಲ ಕೆಲಿಂಜಗುರಿ , ಕೃಷ್ಣ ಪೂಜಾರಿ, ಸುಧಾಕರ್ ಪೂಜಾರಿ, ಶ್ರೀಧರ ಬಾಳೆಕಲ್ಲು, ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ನೂತನ ಉಡುಪುಗಳ ಮಳಿಗೆಗೆ ಶುಭ ಹಾರೈಸಿದರು.
ಯಶವಂತ ಪೂಜಾರಿ ಮಾಲಕತ್ವದ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆಯಲ್ಲಿ ಬಾಂಬೆ ಕಲ್ಕತ್ತ, ಸೂರತ್, ನಾಗಪುರಂ, ಅಹಮದ್ ಬಾದ್ ಎಲ್ಲ ಬ್ರಾಂಡ್ ನ ಉತ್ಪನ್ನಗಳು ಲಭ್ಯವಿದೆ.
ಈ ಮಳಿಗೆಯಲ್ಲಿ ವಿಶೇಷವಾಗಿ ಪ್ರಸಿದ್ಧ ಬ್ರಾಂಡ್ ಗಳನ್ನೂಳಗೊಂಡ ಬೃಹತ್ ಕಲೆಕ್ಷನ್ ಗಳು ಲಭ್ಯವಿದ್ದು, ಪುರುಷರ ವಿವಿಧ ವಿನ್ಯಾಸದ ಶರ್ಟ್ ಗಳು, ಪ್ಯಾಂಟ್ ಪೀಸ್, ಹಾಗೂ ಕಾಂಚೀಪುರಂ, ಫ್ಯಾನ್ಸಿ, ಕಾಟನ್, ರೇಷ್ಮೆ ಹೀಗೆ ಹಲವು ವಿನ್ಯಾಸದ ಸೀರೆಗಳು ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳು, ಹಾಗೂ ಮಕ್ಕಳ ವಿವಿಧ ಶೈಲಿಯ ಫ್ಯಾಷನ್ ಉಡುಪುಗಳು ಹಾಗೂ ಎಲ್ಲಾ ಮಾದರಿಯ ಉಡುಪುಗಳು ವಿಶೇಷ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ಗ್ರಾಹಕರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಎಲ್ಲಾ ಮಾದರಿಯ ವಿವಿಧ ವಿನ್ಯಾಸದ ಉಡುಪುಗಳು ದೊರೆಯುತ್ತದೆ.
ಹವಾನಿಯಂತ್ರಿತ ಶೋ ರೂಮ್ ಜೊತೆಗೆ ಸುಸಜ್ಜಿತ ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆ ಇಂದೇ ಭೇಟಿ ನೀಡಿ.. ನಿಮ್ಮಿಷ್ಟದ ಬಟ್ಟೆಗಳನ್ನು ಖರೀದಿಸಿ.
ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಶೇಕಡಾ 25 ರಷ್ಟು ರಿಯಾಯಿತಿ ನೀಡಲಾಗಿದೆ.
ಇಂದೇ ಭೇಟಿ ನೀಡಿ,
ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್
ಎರಡನೇ ಮಹಡಿ
ಸ್ಮಾರ್ಟ್ ಸಿಟಿ ಸಂಕೀರ್ಣ
ವಿಟ್ಲ ಪುತ್ತೂರು ಮುಖ್ಯ ರಸ್ತೆ, ವಿಟ್ಲ