Friday, June 27, 2025
spot_imgspot_img
spot_imgspot_img

ಹಸಿರು ಪಟಾಕಿ ಬಳಕೆಗೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

- Advertisement -
- Advertisement -

ಬೆಂಗಳೂರು,ನ(13): ಹಸಿರು ಪಟಾಕಿ ಬಳಕೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಪೊಲೀಸರು ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಸಿರು ಚಿಹ್ನೆ, ನೀರಿ ಸಂಸ್ಥೆ ದೃಢೀಕರಣ ಇರಬೇಕು. ಹಸಿರು ಪಟಾಕಿ ಮಾತ್ರ ಮಾರಲಾಗುತ್ತಿದೆಯೇ ಪರಿಶೀಲಿಸಬೇಕು. ಸರ್ಕಾರ,‌ ಪೊಲೀಸರು ಸ್ಥಳೀಯಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ. ನಿಯಮದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು.

ಬೇರೆ ಪಟಾಕಿಗಳ ಬಳಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಅಂತಾ ಹೈಕೋರ್ಟ್​ ಕಡಕ್ ಸೂಚನೆ ನೀಡಿದೆ.ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಾ ಕ್ರಮವಹಿಸಬೇಕು. ಶಬ್ದಮಾಲಿನ್ಯ, ವಾಯುಮಾಲಿನ್ಯವನ್ನ ಅಳೆಯಬೇಕು‌.

ಪಟಾಕಿಗಳ ಮಾಲಿನ್ಯದಿಂದ ಸಾರ್ವಜನಿಕ ಆರೋಗ್ಯಕ್ಕೆ ಸಮಸ್ಯೆ ಆಗಿದೆ. ಅರ್ಜಿದಾರರು ತಡವಾಗಿ ಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದಾರೆ. ಇಲ್ಲವಾದರೆ ಪಟಾಕಿ ನಿಷೇಧಿಸುವ ಕಠಿಣ ಆದೇಶ ನೀಡಬಹುದಿತ್ತು. ಸರ್ಕಾರ, ಬಿಬಿಎಂಪಿ ವರದಿ ಸಲ್ಲಿಸಬೇಕು. ಹೈಕೋರ್ಟ್ ಆದೇಶ ಜಾರಿಗೊಳಿಸಿದ ವರದಿ ಸಲ್ಲಿಕೆಗೆ ಸೂಚನೆ ನೀಡಿದೆ.

- Advertisement -

Related news

error: Content is protected !!