ಮುಂಚಿನಿಂದಲೂ ತುಂಬಾ ಫಿಟ್ ಆಗಿದ್ದಾರೆ ಶಂಕರ್ ಸಿಂಗ್ ವಾಘೇಲ
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಗಾಂಧಿನಗರ: ಗುಜರಾತ್ ನ ಮಾಜಿ ಸಿಎಂ ಶಂಕರ್ ಸಿಂಗ್ ವಾಘೇಲ ಕೊರೊನಾದಿಂದ ಗುಣಮುಖರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿದ್ರೂ, ಮುಂಚಿನಿಂದಲೂ ತುಂಬಾನೇ ಫಿಟ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬತೆ ಶಂಕರ್ ಸಿಂಗ್ ವರ್ಕೌಟ್ ಮಾಡುವ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
Nothing can stop you if you don’t stop for anything. pic.twitter.com/QW1eieKhpN
— Shankersinh Vaghela (@ShankersinhBapu) July 24, 2020

ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಚೆಸ್ಟ್ ಪ್ರೆಸಿಂಗ್ , ಬೆಂಚ್ ಪ್ರೆಸಿಂಗ್ ಮುಂತಾದ ವರ್ಕೌಟ್ ಮಾಡ್ತಿದ್ದಾರೆ. ಇದಕ್ಕೂ ಮೊದಲು ಅವರು ವರ್ಕೌಟ್ ಮಾಡುತ್ತಿರುವ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದು, ಬಾಡಿ ಫಿಟ್+ಮೈಂಡ್ ಫಿಟ್=ಲೈಫ್ ಫಿಟ್ ಎಂದು ಅಡಿಬರಹ ನೀಡಿದ್ದರು.

તન ફીટ + મન ફીટ = જીવન હિટ pic.twitter.com/Fhi1O1kQly
— Shankersinh Vaghela (@ShankersinhBapu) July 23, 2020
ಇನ್ನು 80 ವರ್ಷ ವಯಸ್ಸಾಗಿದ್ರೂ ಮಾಜಿ ಸಿಎಂ ಶಂಕರ್ ಸಿಂಗ್ ವರ್ಕೌಟ್ ಮಾಡುತ್ತಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಹಕ್ಕೆ ವಯಸ್ಸಾದ್ರೂ ಮನಸ್ಸಿಗೆ ಅಲ್ಲ ಅಂದು ಕಮೆಂಟ್ ಮಾಡಿದ್ದಾರೆ.
