- Advertisement -
- Advertisement -
ಮಂಗಳೂರು: ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿರುವ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ದುರ್ದೈವಿಗಳನ್ನು ಸಫ್ವಾನ್(16) ಹಾಗೂ ಸಹ್ಲಾ(10) ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಂಗ್ಲಗುಡ್ಡೆ ಎಂಬಲ್ಲಿ ಇಂದು ಮಧ್ಯಾಹ್ನ ಗುಡ್ಡ ಕುಸಿದಿತ್ತು. ಭಾರೀ ಕಾರ್ಯಾಚರಣೆ ನಡೆಸಿದರೂ ಮಕ್ಕಳ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ.
ಗುಡ್ಡ ಕುಸಿದಿರುವುದರಿಂದ ಹಲವು ಮನೆಗಳು, ಕುಟುಂಬ ಅಪಾಯದಲ್ಲಿದೆ. ಈಗಾಗಲೇ ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇಲ್ಲಿನ ಎಂಟು ಮನೆಗಳು ಅಪಾಯದಲ್ಲಿದೆ. ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು ಸ್ಥಳೀಯರು ಮಣ್ಣು ತೆರವು ಗೊಳಿಸುತ್ತಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ.




- Advertisement -