Tuesday, July 8, 2025
spot_imgspot_img
spot_imgspot_img

ಗುರುಪುರ: ಹುಟ್ಟು ಹಬ್ಬದ ಸಂಭ್ರಮದಲ್ಲಿ ವಜ್ರದೇಹಿ ಮಠದ ಸ್ವಾಮಿಜೀ

- Advertisement -
- Advertisement -

ಗುರುಪುರ: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜೀಯವರು 48 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚಾರಣೆಯಲ್ಲಿದ್ದಾರೆ.

ಶ್ರೀ ರಾಜಶೇಖರನಂದ ಸ್ವಾಮಿಜೀಯವರು ಕುತ್ತೆತ್ತೂರು ಕಂಬಳಿ ಮನೆ ದೇವಕಿ ಶೆಟ್ಟಿ ಬೊಕ ವರ್ಕಾಡಿ ಪಿಲಿಕಲ ಗುತ್ತು ಬಾಬು ಶೆಟ್ಟಿ ದಂಪತಿಗಳ ಸುಪುತ್ರರಾಗಿದ್ದಾರೆ.

ಸ್ವಾಮಿಜಿಯವರು ತನ್ನ 22 ನೇ ವರ್ಷ ವಯಸ್ಸಿನಲ್ಲಿ ಮಧ್ವ ಪರಂಪರೆಯ ಪ್ರಕಾರ ಪಲಿಮಾರು ಮಠ ವಿದ್ಯಾಮಾಣ್ಯ ತೀರ್ಥ ಸ್ವಾಮಿಜಿಯವರಿಂದ ದೀಕ್ಷೆ ಪಡೆದರು.

ಶ್ರೀಯುತರು ತಾಯಿಯ ಪ್ರೇರಣೆ ಮತ್ತು ಸ್ವಂತ ಇಚ್ಚಾಶಕ್ತಿಯಿಂದ ಸನ್ಯಾಸತ್ವಕ್ಕೆ ಬಂದು ಬಡವರ ಹಿಂದು ಸಮಾಜದ ಏಳಿಗೆಗೆ ಬೇಕಾಗಿ ಕೆಲಸ ಮಾಡುವ ಯೋಚನೆ ಮತ್ತು ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.

ಸ್ವಾಮೀಜಿಯವರು ಯುವ ಜನತೆ ಸ್ಥೈರ್ಯ ಮತ್ತು ಧೈರ್ಯ ಗಟ್ಟಿ ಮಾಡಿ. ಹಿಂದು ಸಮಾಜ ಸಧೃಡ ಆಗಬೇಕೆಂದು ಸಮಾಜಕ್ಕೆ ಸಂದೇಶ ನೀಡಿದರು.

ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಕೋವಿಡ್ ಹರಡುವಿಕೆ ತಪ್ಪಿಸುವಲ್ಲಿ ಪರಸ್ಪರ ಆಲಿಂಗನ, ಹಸ್ತಲಾಘನ, ಮಾಡಬಾರದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸನಾತನ ಧರ್ಮ ಹೇಳಿದ ನಮಸ್ಕಾರ ಪದ್ದತಿಯನ್ನು ಪಾಲಿಸಬೇಕು. ಈ ಸಂಕಷ್ಟದ ಸಮಯದಲ್ಲಿ ಧರ್ಮ ಅನುಸರಣೀಯ . ಕೋವಿಡ್ ಎರಡು ವರ್ಷಗಳ ಕಾಲ ತನ್ನ ಕರಾಳ ಛಾಯೆ ಮೂಡಿಸಿದ್ದು ಸರಿಯಾಗಿ ಅಂತ್ಯ ಸಂಸ್ಕಾರ ಸಿಗುತ್ತಿಲ್ಲ ಆದರೆ ಸಂಘಟನೆಗಳು ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಮಾಡುತ್ತಿದೆ. ಮತ್ತೊಮ್ಮೆ ಧರ್ಮ ಸಂಘಟನೆಯ ಮಹತ್ವ ಮನದಟ್ಟಾಗುತ್ತಿದೆ ಎಂದು ಹೇಳಿದರು.

- Advertisement -

Related news

error: Content is protected !!