Wednesday, July 2, 2025
spot_imgspot_img
spot_imgspot_img

ಹೇರ್ ಡ್ರೈಯರ್ ಕೈಯಲ್ಲೇ ಸ್ಫೋಟ: ಮಹಿಳೆಯ ಎರಡು ಕೈಗಳು ತುಂಡು

- Advertisement -
- Advertisement -

ಬೆಂಗಳೂರು: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಕೈಯಲ್ಲೇ ಸ್ಫೋಟಗೊಂಡು ಮೃತ ಯೋಧರೊಬ್ಬರ ಪತ್ನಿಯ ಎರಡೂ ಕೈಗಳು ತುಂಡಾಗಿರುವ ದಾರುಣ ಘಟನೆ ಬಾಗಲಕೋಟೆಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಯೋಧ ದಿ.ಪಾಪಣ್ಣ ಎಂಬವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ.

2017ರಲ್ಲಿ ಜಮ್ಮು- ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು.ಬಸಮ್ಮ ಅವರ ಸ್ನೇಹಿತೆ ಶಶಿಕಲಾ ಎಂಬವರ ಹೆಸರು, ನಂಬ‌ರ್ ಇದ್ದ ಪಾರ್ಸಲ್ ಕೊರಿಯರ್‌ನಲ್ಲಿ ಬಂದಿತ್ತು. ಶಶಿಕಲಾ ಅವರ ಪತಿ ಕೂಡ ಯೋಧರಾಗಿದ್ದರು. ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಅವರು ಊರಲ್ಲಿ ಇರದ ಕಾರಣ ಬಸಮ್ಮನವರಿಗೆ ಕೊರಿಯರ್ ಪಡೆದು ತೆಗೆದು ನೋಡಲು ತಿಳಿಸಿದ್ದರು.

ತೆಗೆದು ನೋಡಿದಾಗ ಹೇರ್ ಡ್ರೈಯರ್ ಇತ್ತು. ಈ ವೇಳೆ ಪಕ್ಕದ ಮನೆಯವರು ಹೇರ್ ಡ್ರೈಯರ್ ಆನ್ ಮಾಡಲು ತಿಳಿಸಿದ್ದಾರೆ. ಸ್ವಿಚ್ ಹಾಕಿ ಆನ್ ಮಾಡಿದಾಗ ಕೈಯಲ್ಲೇ ಹೇರ್ ಡ್ರೈಯರ್ ಸ್ಫೋಟಗೊಂಡಿದೆ. ಬಸಮ್ಮನವರ ಎರಡೂ ಕೈಗಳು ತುಂಡಾಗಿದ್ದು, ಬೆರಳುಗಳು ಛಿದ್ರ ಛಿದ್ರವಾಗಿವೆ. ಬಸಮ್ಮನನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕಲಾ ಅವರನ್ನು ವಿಚಾರಿಸಿದಾಗ ನಾನು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ. ಆದರೆ ನನ್ನ ಹೆಸರಲ್ಲಿ ಹೇರ್ ಡ್ರೈಯರ್ ಬಂದಿದೆ. ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂದು ಪೊಲೀಸರಿಂದ ತನಿಖೆ ನಡೆದಿದೆ. ಸದ್ಯ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಉತ್ಪಾದನೆಯಾಗಿದ್ದು, ಕೊರಿಯರ್ ಬಾಗಲಕೋಟೆಯಿಂದ ಬಂದಿದೆ ಎಂದು ತಿಳಿದು ಬಂದಿದೆ. ಇಳಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!