Thursday, July 3, 2025
spot_imgspot_img
spot_imgspot_img

ಐತಿಹಾಸಿಕ ಹಂಪಿಯ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಗೋಡೆ ಕುಸಿತ

- Advertisement -
- Advertisement -

ವಿಜಯನಗರ: ಐತಿಹಾಸಿಕ ಹಂಪಿಯಲ್ಲಿ ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದ್ದು, ಐತಿಹಾಸಿಕ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಕೋಟೆ ಗೋಡೆಯ ಒಂದು ಭಾಗ ಕುಸಿದು ಬಿದ್ಧ ಘಟನೆ ನಡೆದಿದೆ.

ಹೌದು ಹೊಸಪೇಟೆ ತಾಲೂಕಿನಲ್ಲಿ ಇರುವ ಹಂಪಿಯ ಐತಿಹಾಸಿಕ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಕೋಟೆ ಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು, ಈ ಘಟನೆಯಲ್ಲಿ ಯಾವುದೇ ಸ್ಮಾರಕಗಳಿಗೆ ಹಾನಿಯಾಗಿಲ್ಲ. ಕಲ್ಲಿನಿಂದ ನಿರ್ಮಿಸಿದ್ದ ಪುರಾತನವಾದ ಗೋಡೆ ಇದಾಗಿದ್ದು, ಈ ಘಟನೆ ಸಂಭವಿಸಿದಾಗ ಅಲ್ಲಿ ಯಾರೊಬ್ಬರೂ ಕೂಡ ಇರಲಿಲ್ಲ ಎಂಬ ಮಾಹಿತಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!