ವಿಟ್ಲ: ಇನೋಳಿಯ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನ ಶಾಸ್ತ್ರ ವಿಭಾಗ ತಯಾರಿಸಿದ ಹ್ಯಾಂಡ್ ಸಾನಿಟೈಸರ್ ಗಳನ್ನು ವಿವಿಧ ಸಂಸ್ಥೆಗಳಿಗೆ ವಿತರಿಸಲಾಯಿತು.


ಇನೋಳಿಯ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನ ಶಾಸ್ತ್ರ ವಿಭಾಗಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ (ಟೆಕಿಪ್) ಯೋಜನೆಯಡಿ ವಿತರಿಸಲು ಆರ್ಥಿಕ ಅನುದಾನ ಲಭಿಸಿತ್ತು.
ದೇಶಾದ್ಯಂತ ಕೊರೊನ ಭೀತಿ ಎದುರಾಗಿದ್ದು, ಈ ಯೋಜನೆಯಡಿ ತಯಾರಿಸಿದ ಹ್ಯಾಂಡ್ ಸಾನಿಟೈಸರ್ ಕಾಲೇಜಿನ ಆಸುಪಾಸಿನಲ್ಲಿರುವ ಸರಕಾರಿ ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳು, ಪೊಲೀಸ್ ಠಾಣೆಗಳು, ಮಸೀದಿ, ಮಂದಿರಗಳು, ಚರ್ಚುಗಳು ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ವಿತರಿಸಲಾಯಿತು.

ಕಾಲೇಜಿನ ಸಮೀಪದ ಕೊಣಾಜೆ ಗ್ರಾಮ ಪಂಚಾಯಿತಿಗೂ ವಿತರಿಸಲಾಯಿತು. ಪಂಚಾಯಿತಿ ಅಧ್ಯಕ್ಷ ನಝರ್ ಷಾ, ಅಭಿವೃದ್ಧಿ ಅಧಿಕಾರಿ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಾನಿಟೈಸರ್ ಸದ್ಯದ ಮಾರುಕಟ್ಟೆಯಲ್ಲಿ ಸಿಗುವ ಹಲವು ಸಾನಿಟೈಸರ್‌ಗಳಿಗಿಂತಲೂ ಉತ್ತಮ ಗುಣಾಮಟ್ಟದ್ದಾಗಿದೆ. ಈ ಸಾನಿಟೈಸರ್ ನಲ್ಲಿ ಪ್ರಮುಖವಾಗಿ 75% ಐಪಿಎ, ಗ್ಲಿಸರೋಲ್, ಜಲಜನಕದ ಪೆರೋಕ್ಸೈಡ್ ಹಾಗೂ ಸುಗಂದಕ್ಕಾಗಿ ಸರಭೂತ ತೈಲವನ್ನು ಉಪಯೋಗಿಸಲಾಗಿದೆ.
ಸಂಸ್ಥೆಯ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ. ಮುಸ್ತಫಾ ಖಲೀಲ್ ವಿಟ್ಲ , ಪ್ರೊ. ಇಮ್ರಾನ್ ವುಲವೂರ್ ಅಹ್ಮದ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಸಫ್ವಾನ್ ಕರ್ವೆಲ್ ವಿತರಿಸಿದರು.

ಸಾನಿಟೈಸರ್ನೊಂದಿಗೆ ಸೋಂಕು ನಿವಾರಕ ರಾಸಾಯನಿಕವನ್ನೂ ವಿತರಿಸಲಾಯಿತು. ಸಾಮಾಜಿಕ ಕಳಕಳಿಯ ಈ ಕಾರ್ಯಕ್ರಮವನ್ನು ಎಲ್ಲರೂ ಮೆಚ್ಚಿಕೊಂಡು ಬಿಐಟಿಗೆ ಅಭಿನಂದನೆ ಸಲ್ಲಿಸಿದರು. ಈ ಉತ್ತಮ ಕಾರ್ಯಕ್ರಮಕ್ಕೆ ಅನುದಾನ ಒದಗಿಸಿದ ವಿಟಿಯುಗೆ ಕಾಲೇಜಿನ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಹಾಗೂ ಮುಖ್ಯಸ್ಥರಾದ ಡಾ. ಮಂಜೂರ್ ಭಾಷಾ ವಿಶೇಷವಾಗಿ ಅಭಿನಂದಿಸಿದರು.