Friday, May 3, 2024
spot_imgspot_img
spot_imgspot_img

ನ್ಯೂಯಾರ್ಕ್​​ನ ​ನಲ್ಲಿ ಮೊಳಗಿದ ಹರ್ ಹರ್ ಮಹಾದೇವ್ ಝೇಂಕಾರ : ಮಹಾಶಿವರಾತ್ರಿಯ ಸಂಭ್ರಮ:

- Advertisement -G L Acharya panikkar
- Advertisement -

ಮಹಾಶಿವರಾತ್ರಿ ಯನ್ನು ಭಾರತದಲ್ಲಿ ಮಾತ್ರ ಆಚರಿಸುವುದಿಲ್ಲ. ಬೇರೆ ಬೇರೆ ವಿದೇಶಗಳಲ್ಲೂ ಮಹಾಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದೇ ರೀತಿಯಾಗಿ ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ನ್ಯೂಯಾರ್ಕ್​​ನ ಜನರು ಆಚರಿಸಿದ್ದಾರೆ.

ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ. ಜೊತೆಗೆ ಪ್ರಪಂಚದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದ್ದು, ಇದನ್ನು ಕಂಡ ನ್ಯೂಯಾರ್ಕ್​ನ ಜನರು ‘ಹರ್ ಹರ್ ಮಹಾದೇವ್’ ಎಂದು ರಸ್ತೆಬದಿಗಳಲ್ಲಿ ನೃತ್ಯವನ್ನು ಮಾಡಿದ್ದಾರೆ.

ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್​ ಸದ್ಗುರು ಅವರು, ‘ನ್ಯೂಯಾರ್ಕ್ ಜನರು ಮಹಾಶಿವರಾತ್ರಿಯನ್ನು ಸ್ವಾಗತಿಸಿದ್ದಾರೆ. ಶಿವನ ಮಹಾರಾತ್ರಿಯ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಇದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಪರಿವರ್ತನೆಯ ಅವಕಾಶವಾಗಿದೆ.’ ಎಂದಿದ್ದಾರೆ.

- Advertisement -

Related news

error: Content is protected !!