Monday, April 29, 2024
spot_imgspot_img
spot_imgspot_img

ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ

- Advertisement -G L Acharya panikkar
- Advertisement -

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ದೇವಿಗೆ ರಥೋತ್ಸವ ಜರುಗಿದೆ‌. ಸಾಮಾನ್ಯವಾಗಿ ಕೃಷಿ ಕೆಲಸ ಮಾಡುವವರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುವುದಿಲ್ಲ ಈ ಹಿನ್ನೆಲೆಯಲ್ಲಿಓರ್ವ ಯುವ ರೈತನೊಬ್ಬ, ರೈತರಿಗೆ ಕನ್ಯೆ ಕೊಡಲಿ ಎಂದು ಬರೆದು ರಥೋತ್ಸವದಲ್ಲಿ ಹರಕೆ ತೀರಿಸಿದ್ದಾನೆ.

‌ಹರಿಕೆಯಲ್ಲಿ ಏನಿದೆ?: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ. ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ, ರೈತರಿಗೂ ಮದುವೆಯಾಗಲು ಹೆಣ್ಣು ಸಿಗಲಿ. ಎಲ್ಲರಿಗೂ ಈ ರೀತಿಯ ಮನಸ್ಥಿತಿಯನ್ನು ಕರುಣಿಸಲಿ ಎಂದು ಹರಕೆ ತೀರಿಸಿದ್ದಾರೆ. ರೈತ ಬಾಳೆಹಣ್ಣಿನ ಮೇಲೆ ಬರೆದಿರುವ ಹರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -

Related news

error: Content is protected !!