Thursday, December 5, 2024
spot_imgspot_img
spot_imgspot_img

ಗಂಡು ಮಗುವಿಗೆ ತಂದೆಯಾದ ಹಾರ್ದಿಕ್‌ ಪಾಂಡ್ಯ.!

- Advertisement -
- Advertisement -

ಹೊಸದಿಲ್ಲಿ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ತಂದೆಯಾದ ಸಂತಸದಲ್ಲಿದ್ದಾರೆ. ಹಾರ್ದಿಕ್ ಪ್ರೇಯಸಿ ನತಾಶಾ ಸ್ಟಾಂಕೋವಿಕ್​ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಹಾರ್ದಿಕ್ ಪಾಂಡ್ಯಾ‌ ತಮ್ಮ ಮಗುವಿನ ಕೈ ಹಿಡಿದಿರುವ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವ ಮೂಲಕ ಪ್ರಕಟಿಸಿದ್ದಾರೆ. 

View this post on Instagram

We are blessed with our baby boy ❤️??

A post shared by Hardik Pandya (@hardikpandya93) on

ಪ್ರೇಯಸಿ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಈ ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ವಿತಾರ್ಥದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸರ್ ಪ್ರೈಸ್ ನೀಡಿದ್ದರು ಹಾರ್ದಿಕ್.ಬಳಿಕ ಮೇನಲ್ಲಿ ಲಾಕ್​ಡೌನ್​ ಸಮಯದಲ್ಲಿ ತಂದೆಯಾಗುತ್ತಿರುವ ವಿಷಯವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಈ ನಡುವೆ ಅವರು ಸರಳವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಹಾರ್ದಿಕ್‌-ನತಾಶ ದಂಪತಿಗೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಮುಖ್ಯ ಕೋಚ್‌ ರವಿಶಾಸ್ತ್ರಿ ಶುಭಾಶಯಗಳನ್ನು ತಿಳಿಸಿದ್ದಾರೆ.

- Advertisement -

Related news

error: Content is protected !!