- Advertisement -
- Advertisement -



ವಿಟ್ಲ ಗ್ಯಾಸ್ ಏಜನ್ಸಿ ಸಿಬ್ಬಂದಿ ಮೇಲೆ ಅನ್ಯಕೋಮಿನ ತಂಡದಿಂದ ಹಲ್ಲೆ ನಡೆಸಿರುವುದು ಸರಕಾರ ಬದಲಾದಗ ಮತಾಂಧರ ಅಟ್ಟಹಾಸದ ಆರಂಭದ ಸೂಚನೆ ಇದಾಗಿದೆ ಎಂದು ಪುತ್ತೂರು ಬಿಜೆಪಿ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ತಮ್ಮ ಆಕ್ರೋಶ ವ್ಯಕ್ತಪಡಿಸಿ ಘಟನೆಯನ್ನು ಖಂಡಿಸಿದ್ದಾರೆ.
ಹಿಂದೂ ಸಮಾಜದ ಅಮಾಯಕ ವ್ಯಕ್ತಿಗಳ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವ ಇದರ ಹಿಂದಿನ ಷಡ್ಯಂತ್ರವನ್ನು ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಂತಹ ಕೃತ್ಯಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಒಗ್ಗಾಟ್ಟಾಗಿ ಇದಕ್ಕೆ ಪ್ರತ್ಯುತ್ತರವನ್ನು ಕೊಟ್ಟೇ ಕೊಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.
- Advertisement -








