Thursday, May 2, 2024
spot_imgspot_img
spot_imgspot_img

ಮಹಿಳೆ ಮತ್ತು ಇಬ್ಬರು ಮಕ್ಕಳ ಮೇಲೆ ದಾಳಿ ನಡೆಸಿದ ತಮ್ಮದೇ ಮನೆಯ ಪಿಟ್‌ಬುಲ್‌ ನಾಯಿ..!

- Advertisement -G L Acharya panikkar
- Advertisement -

ಡೇಂಜರಸ್‌ ಶ್ವಾನ ಎಂದೇ ಕುಖ್ಯಾತಿ ಪಡೆದ ಪಿಡ್‌ಬುಲ್‌ ತಳಿಯ ನಾಯಿಗಳ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇಲ್ಲೊಂದು ಕಡೆ ಪಿಟ್‌ಬುಲ್ ನಾಯಿ ಮಹಿಳೆ ಮತ್ತು ಮಕ್ಕಳ ಮೇಲೆ ದಾಳಿ ನಡೆಸಿದೆ. ಇದರಿಂದ ಮಹಿಳೆಯ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದು, 50ಕ್ಕೂ ಅಧಿಕ ಹೊಲಿಗೆಗಳನ್ನು ಹಾಕಲಾಗಿದೆ.

ಈ ಘಟನೆ ಹರಿಯಾಣದ ರೇವಾರಿಯ ಬಲಿಯಾರ್ ಖುರ್ದ್ ಗ್ರಾಮದಲ್ಲಿ ನಡೆದಿದೆ. ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ತಮ್ಮ ಮನೆಯಲ್ಲೇ ಸಾಕುತ್ತಿದ್ದ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಕಾಲು, ಕೈ ಮತ್ತು ತಲೆಗೆ 50 ಹೊಲಿಗೆ ಹಾಕಲಾಗಿದೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

ಸೂರಜ್ ಎಂಬವರು ಪಿಟ್‌ಬುಲ್ ನಾಯಿ ಸಾಕುತ್ತಿದ್ದರು. ಸೂರಜ್ ಅವರು ಪತ್ನಿಯೊಂದಿಗೆ ಮನೆಗೆ ಬಂದಾಗ ಅವರ ಸಾಕುನಾಯಿ ದಾಳಿ ಮಾಡಿದೆ. ಈ ವೇಳೆ ಅವರ ಕೂಗು ಕೇಳಿದ ಅಕ್ಕಪಕ್ಕದವರು ನಾಯಿಯಿಂದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ.

astr
- Advertisement -

Related news

error: Content is protected !!