- Advertisement -
- Advertisement -
ಹಾಸನ: ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ

ಪಾಪಣ್ಣ ಮತ್ತು ಬಸವರಾಜು ಕುಟುಂಬಗಳ ನಡುವೆ ಭೂ ವಿವಾದಕ್ಕೆ ಸಂಬಂಧಿಸಿ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಮಲ್ಲೇಶ್(58), ರವಿಕುಮಾರ್, (35 ) ಮಂಜೇಶ್ (35) ಕೊಲೆಯಾದ ದುರ್ದೈವಿಗಳಾಗಿದ್ದು, ಕೊಲೆ ಮಾಡಿ ಆರೋಪಿ ಪಾಪಣ್ಣಿ ಸ್ವತಃ ಚಾಕುವಿನಿಂದ ಇರಿದುಕೊಂಡು ಸಾವಿಗೀಡಾಗಿದ್ದಾನೆ.

ಎರಡು ಕುಟುಂಬಗಳ ನಡುವೆ ಭೂ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆದು ಮಲ್ಲೇಶ, ರವಿಕುಮಾರ್, ಮಂಜೇಶ್ ಅವರ ಪರ ತೀರ್ಪು ಇತ್ತಿಚೆಗೆ ಹೊರ ಬಿದ್ದಿತ್ತು. ಈ ಬಗ್ಗೆ ಇಂದು ಸಂಜೆ ಜಗಳ ನಡೆದು ಪರಸ್ಪರ ಮಾರಕಾಸ್ತ್ರ ಝಳಪಿಸಿದ ಪರಿಣಾಮ ಮೂವರ ಕೊಲೆಯಾಗಿದೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿದ್ದಾರೆ.


- Advertisement -