Tuesday, July 1, 2025
spot_imgspot_img
spot_imgspot_img

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ; ನೂರಕ್ಕೂ ಹೆಚ್ಚು ಮಂದಿಗೆ ಗಾಯ

- Advertisement -
- Advertisement -

ಉತ್ತರ ಪ್ರದೇಶ: ಮೌನಿ ಅಮಾವಾಸ್ಯೆಯ ದಿನದಂದು ಮಹಾಕುಂಭದಲ್ಲಿ ಸಂಗಮ ಸ್ನಾನ ಮಾಡಲು ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದ್ದು, ಭಕ್ತರು ಮಲಗಿದ್ದ ಜಾಗದಲ್ಲಿ ಒಂದು ಕಡೆ ತಡೆಗೋಡೆ ಒಡೆದು ಇದೀಗ ಕಾಲ್ತುಳಿತದ ಸುದ್ದಿಯಾಗಿದೆ.100ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾವೆ.

ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಜನಸಂದಣಿ ನಿಯಂತ್ರಣ ತಪ್ಪಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಕಾಲ್ತುಳಿತದ ನಂತರ ಪರಿಸ್ಥಿತಿಯನ್ನು ತಕ್ಷಣವೇ ಹತೋಟಿಗೆ ತರಲಾಯಿತು ಸಂಗಮ ಮಾರ್ಗದಲ್ಲಿ ಜನಸಂದಣಿಯನ್ನು ತೆರವುಗೊಳಿಸಲು ಒತ್ತು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕಾಲ್ತುಳಿತದ ನಂತರ ಅಖಾಡ ಪರಿಷತ್ತು ಅಖಾಡಗಳ ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿತು.ಅಮೃತ ಸ್ನಾನದ ಕುರಿತು ಅಖಾರ ಪರಿಷತ್ತಿನ ಪ್ರಕಟಣೆ ಹೊರಬಿದ್ದಿದೆ.ಎಲ್ಲಾ 13 ಅಖಾಡಗಳ ಸ್ನಾನವನ್ನು ರದ್ದುಗೊಳಿಸಲಾಗಿದೆ. ಮೌನಿ ಅಮವಾಸ್ಯೆಯಂದು ಅಮೃತ ಸ್ನಾನ ನಡೆಯುವುದಿಲ್ಲ ಎಂಬ ವರದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಸಂತರು ಹಿಂದಿರುಗುತ್ತಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!