Friday, May 3, 2024
spot_imgspot_img
spot_imgspot_img

ಪ್ರತಿದಿನ ಮೊಸರು ಸೇವಿಸಿ, ಉತ್ತಮ ಆರೋಗ್ಯ ಪಡೆಯಿರಿ.

- Advertisement -G L Acharya panikkar
- Advertisement -

ದಿನ ನಿತ್ಯ ಮೊಸರು ಸೇವಿಸುವುದರಿಂದ ಹಲವು ಸಮಸ್ಯೆಯಿಂದ ದೂರವಿರಬಹುದು. ಮೊಸರಿನಲ್ಲಿ ರಾಸಾಯನಿಕ ಪದಾರ್ಥಗಳಿದ್ದು, ಹಾಗಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಸಿಗಲಿದೆ.

ಪ್ರತಿದಿನ ಮೊಸರು ಸೇವನೆಯಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಯಾಕಂದ್ರೆ ಅದರಲ್ಲಿ ಕ್ಯಾಲ್ಸಿಯಂ, ವಿಟಮಿನ್, ಕ್ಯಾಲೊರಿ ಹಾಗೂ ಪ್ರೋಟೀನ್‍ಗಳು ಇವೆ. ಇವು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ. ಮೊಸರು ಒಂದು ಡೈರಿ ಉತ್ಪನ್ನವಾಗಿದೆ. ಇದು ಕ್ಯಾಲ್ಸಿಯಂ, ವಿಟಮಿನ್ ಬಿ -2, ವಿಟಮಿನ್ ಬಿ -12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ.

ಮೊಸರಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೇ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ತಲೆಹೊಟ್ಟು ಸೇರಿ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಮೊಸರು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಮೊಸರಿನಲ್ಲಿರುವ ಪೊಟ್ಯಾಷಿಯಮ್ ಮತ್ತು
ಮೆಗ್ನೀಷಿಯಮ್’ಗಳೊಂದಿಗೆ ವಿಶೇಷ ಪ್ರೋಟೀನ್’ಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶಗಳು ಆಧಿಕವಾಗಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.

ಮೊಸರು ಸೇವನೆಯಿಂದ ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ದಿನನಿತ್ಯ ಮೊಸರು ಸೇವನೆಯಿಂದ ಒಣ ಚರ್ಮವು ಮೃದತ್ವವನ್ನು ಪಡೆದುಕೊಳ್ಳುತ್ತದೆ. ಜಠರದ ಸಮಸ್ಯೆಗಳಿಂದಾಗಿ ಬಹಳಷ್ಟು ಜನರು ಮೊಡವೆಗಳಿಂದ ಬಳಲುತ್ತಿದ್ದಾರೆ. ಅಂತವರು ಮೊಸರನ್ನು ಬಳಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಸರು ಕರುಳಿನ ಆರೋಗ್ಯವನ್ನು ಕಾಡುತ್ತದೆ

ಮೊಸರು ದೇಹದಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ . ಇದು ಖನಿಜಗಳು ಮತ್ತು ವಿಟಮಿನ್ಗಳು ಸೇರಿದಂತೆ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿವೆ

ಮೊಸರು ಉತ್ತಮ ಪ್ರೋಬಯಾಟಿಕ್ ಆಗಿದ್ದು ಉರಿಯೂತದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಹೊಟ್ಟೆ ಕೆಟ್ಟಾಗ ಚಿಕಿತ್ಸೆಯ ಮಾರ್ಗವಾಗಿ ಮೊಸರನ್ನು ಬಳಸಬಹುದು. ಇದು ಆಮ್ಲದ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ಅಜೀರ್ಣ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಗುಣಪಡಿಸುತ್ತದೆ. ಹಾಗೇ ಹೊಟ್ಟೆ ಉಬ್ಬುವುದು, ಕೆರಳಿಸುವ ಕರುಳಿನ ಸಹಲಕ್ಷಣಗಳು, ಭೇದಿ, ಮಲಬದ್ಧತೆ, ಜಠರಗರುಳಿನ ಅಸ್ವಸ್ಥತೆಗಳು ಮತ್ತು ಅತಿಸಾರದಂತಹ ಪರಿಸ್ಥಿತಿಗಳನ್ನು ಕಡಿಮೆ ಮಾಡುತ್ತದೆ.

- Advertisement -

Related news

error: Content is protected !!