Saturday, May 4, 2024
spot_imgspot_img
spot_imgspot_img

ಸಿಹಿ ಗೆಣಸು ತಿನ್ನೋದ್ರಿಂದ ಸಿಗುವ ಆರೋಗ್ಯ ಪ್ರಯೋಜನಗಳು

- Advertisement -G L Acharya panikkar
- Advertisement -

ಸಿಹಿ ಗೆಣಸಿನ ಸಾಮಾನ್ಯವಾಗಿ ಅದರ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ. ಈ ಸಿಹಿ ಗೆಣಸನ್ನ ಬೇಯಿಸಿ ಅಥವಾ ಹುರಿದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಇದನ್ನ ಜಾನುವಾರುಗಳ ಆಹಾರವಾಗಿಯೂ ಬಳಸಲಾಗುತ್ತದೆ.

ಈ ಸಿಹಿ ಆಲೂಗೆಡ್ಡೆಯು ಪಿಷ್ಟ ಗ್ಲುಕೋಸ್ ಕೈಗಾರಿಕಾ ಮಧ್ಯ ಮತ್ತು ಸಕ್ಕರೆ ಪಾಕದಂತಹ ಆಹಾರಗಳಲ್ಲಿ ಮೂಲ ಪದಾರ್ಥವಾಗಿ ಬಳಸಲಾಗುತ್ತದೆ. ಸಿಹಿಗೆಣಸು ಅಥವಾ ಸಿಹಿ ಆಲೂಗೆಡ್ಡೆಯು ಐಪೋಮಿಯ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸನ್ನ ಹಲವಾರು ರಾಜ್ಯಗಳಲ್ಲಿ ಹಲವು ರೀತಿಯ ಹೆಸರುಗಳಿಂದ ಕರೆಯಲ್ಪಡುತ್ತದೆ.

ಭಾರತದಲ್ಲಿ ಸಿಹಿ ಗೆಣಸನ್ನು ಬರದ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದಕ್ಕೆ ಹೆಚ್ಚಿನ ನೀರಿನ ಸೌಲಭ್ಯ ಬೇಕಿರದೇ ಇರೋದರಿಂದ ಇದು ಭಾರತದಲ್ಲಿ ಸುಲಭವಾಗಿ ಲಭ್ಯವಿದೆ.

ಆದರೆ ಇತರ ಬಣ್ಣಗಳಲ್ಲಿಯೂ ದೊರೆಯುವ ಸಿಹಿ ಗೆಣಸು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.ಇವುಗಳಲ್ಲಿ ಕ್ಯಾರೊಟಿನಾಯ್ಡ್‌ಗಳು, ಫೀನಾಲಿಕ್ ಆಮ್ಲ ಮತ್ತು ಫ್ಲೇವನಾಯ್ಡ್‌ಗಳಂತಹ ಜೈವಿಕ-ಸಕ್ರಿಯ ಘಟಕಗಳು ಸಮೃದ್ಧವಾಗಿದ್ದು, ಟಾಕ್ಸಿನ್‌ಗಳು ಮತ್ತು ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ಮಧುಮೇಹ ಕಡಿಮೆ ಆಗುತ್ತದೆ.

ಸಿಹಿ ಗೆಣಸುಗಳನ್ನು ಕುದಿಸಿ ತಣ್ಣಗಾಗಿಸಿದರೆ, ಅವು ನಿರೋಧಕ ಪಿಷ್ಟ ಅಥವಾ ಜೆಲ್ಲಿ ತರಹದ ವಸ್ತುವನ್ನು ಬಿಡುಗಡೆ ಮಾಡುತ್ತವೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಅನ್ನು ತಡೆಯುತ್ತದೆ. ಇದು ಗರ್ಭಿಣಿಯರಿಗೆ ಹೆಚ್ಚು ಉತ್ತಮ. ಇದರಿಂದ ಅವರ ಜೀವಕೋಶದ ಆರೋಗ್ಯ ಮತ್ತು ಹೊಟ್ಟೆಯಲ್ಲಿನ ಭ್ರೂಣದ ಆರೋಗ್ಯ ದೃಢವಾಗಿರುತ್ತದೆ.

ಸಿಹಿ ಗೆಣಸು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ, ತಾಮ್ರ ಮತ್ತು ಕೆಲವು ಬಿ ಜೀವಸತ್ವಗಳು, ಸಿ ಮತ್ತು ಇ ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹೃದಯಕ್ಕೆ ಸಂಬಂಧಿಸಿದಂತೆ, ಸಿಹಿ ಗೆಣಸು ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ ಮತ್ತು ದೇಹದ ಅನೇಕ ಕಾರ್ಯಗಳಿಗೆ ಸಹಾಯ ಮಾಡುತ್ತದೆ.ದ್ರವ ನಿಯಂತ್ರಣ ಮತ್ತು ರಕ್ತದೊತ್ತಡಗಳನ್ನು ಆರೋಗ್ಯಕರ ಮಟ್ಟಕ್ಕೆ ಇರಿಸುವಲ್ಲಿ ಇದು ಸಹಾಯಕ. ಈ ಸೂಪರ್‌ಫುಡ್ ಒಟ್ಟಾರೆ ರೋಗನಿರೋಧಕ ಶಕ್ತಿ ಬೂಸ್ಟರ್ ಆಗಿದೆ ಅಂದ್ರೂ ತಪ್ಪಾಗಲಾರದು.

- Advertisement -

Related news

error: Content is protected !!