Friday, May 3, 2024
spot_imgspot_img
spot_imgspot_img

ಬಿರುಕು ಬಿಟ್ಟ ಹಿಮ್ಮಡಿಗಳನ್ನು ಹೀಗೆ ಈಸಿಯಾಗಿ ವಾಸಿ ಮಾಡಿಕೊಳ್ಳಬಹುದು!

- Advertisement -G L Acharya panikkar
- Advertisement -

ಚರ್ಮದ ಸೌಂದರ್ಯ ನಮ್ಮ ಸೌಂದರ್ಯ ಎಂದು ನೇರವಾಗಿ ಹೇಳಬಹುದು. ಏಕೆಂದರೆ ನಮ್ಮ ಚರ್ಮದ ಮೇಲೆ ಒಂದು ಸಣ್ಣ ಕಪ್ಪು ಚುಕ್ಕೆ ಇದ್ದರೂ ಅದು ನಮ್ಮ ಸೌಂದರ್ಯಕ್ಕೆ ದಕ್ಕೆ ಉಂಟು ಮಾಡುತ್ತದೆ. ಹೀಗಾಗಿ ನಮ್ಮ ದೇಹದ ಪ್ರತಿಯೊಂದು ಭಾಗದ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈಗ ಮಳೆಗಾಲ ಕಳೆದು ಇನ್ನೇನು ಚಳಿಗಾಲ ಸಮೀಪಿಸುತ್ತಿದೆ.

ಹೊರಗಡೆ ಮಂಜು ಬೀಳುವುದರಿಂದ ಚಳಿ ಕೂಡ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಹದ ಚರ್ಮ ಒಣಗುವುದು ಸಹಜ. ಇದರ ಪ್ರಭಾವ ನೇರವಾಗಿ ನಮ್ಮ ಹಿಮ್ಮಡಿಗಳ ಭಾಗದಲ್ಲಿ ಎದ್ದು ಕಾಣುತ್ತದೆ. ಏಕೆಂದರೆ ಹಿಮ್ಮಡಿಗಳು ಒಡೆದುಕೊಳ್ಳುತ್ತವೆ. ಆದರೆ ಇದಕ್ಕೆ ಸುಲಭವಾಗಿ ಮನೆಮದ್ದುಗಳು ಲಭ್ಯವಿವೆ. ನೀವೇ ಮಾಡಿಕೊಳ್ಳಬಹುದು. ಹೇಗೆಂದು ನೋಡೋಣ ಬನ್ನಿ.

ಬಾಳೆಹಣ್ಣು, ಜೇನುತುಪ್ಪ ಮತ್ತು ನಿಂಬೆಹಣ್ಣಿನ ಫುಟ್ ಪ್ಯಾಕ್: ಬಾಳೆಹಣ್ಣಿನಲ್ಲಿ ವಿಟಮಿನ್ ಎ ಪ್ರಮಾಣ ಹೇರಳವಾಗಿದೆ. ಹಾಗಾಗಿ ಇದು ಚರ್ಮದ ಹಾನಿ ಸಾಧ್ಯತೆಯನ್ನು ತಡೆಯುತ್ತದೆ ಜೊತೆಗೆ ಸೂರ್ಯನ ಬಿಸಿಲಿನಿಂದ ಚರ್ಮ ಒಣಗಿದ್ದರೆ ಅದನ್ನು ಸರಿಪಡಿಸುತ್ತದೆ. ಇದರ ಜೊತೆಗೆ ಬಳಸಲಾಗುವ ನಿಂಬೆಹಣ್ಣು ತನ್ನಲ್ಲಿ ಆಮ್ಲೀಯ ಪ್ರಭಾವಗಳನ್ನು ಒಳಗೊಂಡಿದ್ದು ಒಣಗಿದ ಮತ್ತು ತುರಿತುರಿಯಾದ ಚರ್ಮವನ್ನು ಮೃದು ಮಾಡುತ್ತದೆ.
ಇದಕ್ಕಾಗಿ ನೀವು ಏನು ಮಾಡಬೇಕು ಎಂದರೆ ಒಂದು ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ.ಈಗ ಅದಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ.

ಇದರ ಜೊತೆಗೆ ಅರ್ಧ ಟೀ ಚಮಚ ನಿಂಬೆಹಣ್ಣಿನ ರಸ ಕೂಡ ಸೇರಿಸಿ ಚೆನ್ನಾಗಿ ಕಲಸಿ ಬಿರುಕು ಬಿಟ್ಟ ಹಿಮ್ಮಡಿಗಳ ಮತ್ತು ಪಾದಗಳ ಭಾಗಕ್ಕೆ ಇದನ್ನು ಅನ್ವಯಿಸಿ ಅರ್ಧ ಗಂಟೆ ಹಾಗೆ ಬಿಡಿ. ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ತೊಳೆದುಕೊಂಡು ಸಾಕ್ಸ್ ಹಾಕಿಕೊಳ್ಳಿ. ಎರಡು ದಿನಗಳಿಗೊಮ್ಮೆ ಹೀಗೆ ಮಾಡುವುದರಿಂದ ಬಿರುಕು ಬಿಟ್ಟ ಹಿಮ್ಮಡಿ ಮೃದುವಾಗುತ್ತದೆ.

ಕೆಲವರಿಗೆ ದೇಹದಲ್ಲಿ ವಿಟಮಿನ್ ಸಿ ಅಂಶ ಕೊರತೆ ಆದರೂ ಕೂಡ ಕಾಲುಗಳ ಭಾಗದಲ್ಲಿ ಚರ್ಮ ಒಣಗುತ್ತದೆ ಮತ್ತು ಹಿಮ್ಮಡಿಗಳ ಭಾಗದಲ್ಲಿ ಬಿರುಕು ಬಿಡುತ್ತದೆ ಎಂದು ಹೇಳುತ್ತಾರೆ. ಅಂತಹವರು ಟರ್ನಿಪ್ ಬಳಕೆ ಯಿಂದ ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿದೆ ಮತ್ತು ಇದು ದೇಹದಲ್ಲಿ ಕೊಲೆಜನ್ ಉತ್ಪತ್ತಿಯಲ್ಲಿ ನೆರವಾಗಿ ಆರೋಗ್ಯಕರ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.

ಇದಕ್ಕಾಗಿ ನೀವು ಒಂದು ಟರ್ನಿಪ್ ತೆಗೆದುಕೊಂಡು ಅದನ್ನು ಸಿಪ್ಪೆ ಸುಲಿದು ಹಚ್ಚಿ, ಚೆನ್ನಾಗಿ ಮ್ಯಾಶ್ ಮಾಡಿ ಒಡೆದುಕೊಂಡ ಹಿಮ್ಮಡಿಗಳ ಭಾಗಕ್ಕೆ ಅನ್ವಯಿಸಬೇಕು. ಕನಿಷ್ಠ ಒಂದು ಗಂಟೆ ಇದನ್ನು ಹಾಗೆ ಇರಲು ಬಿಟ್ಟು ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆದುಕೊಳ್ಳಬೇಕು. ಆಮೇಲೆ ಕಾಲುಗಳಿಗೆ ಸಾಕ್ಸ್ ಹಾಕಿಕೊಳ್ಳಬೇಕು. ವಾರದಲ್ಲಿ ಎರಡು ಬಾರಿ ಈ ಚಿಕಿತ್ಸೆಯನ್ನು ಮಾಡಿಕೊಂಡು ಬಂದರೆ ಒಡೆದುಕೊಂಡ ಹಿಮ್ಮಡಿಯ ಚರ್ಮ ಮೃದುವಾಗುತ್ತದೆ.

ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡುತ್ತದೆ. ಇನ್ನು ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯನ್ನು ಮೃದುವಾಗಿಸಲು ತೇವಾಂಶ ಒದಗಿಸುತ್ತದೆ. ಹೀಗಾಗಿ ನೀವು ಎರಡು ಟೇಬಲ್ ಚಮಚ ಕಡಲೆ ಹಿಟ್ಟು ಮತ್ತು ಅಷ್ಟೇ ಪ್ರಮಾಣದಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ.

ಇದಕ್ಕೆ ಸಮ ಪ್ರಮಾಣದ ಮುಲ್ತಾನಿ ಮಿಟ್ಟಿ ಸೇರಿಸಿ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಕೂಡ ಮಿಕ್ಸ್ ಮಾಡಿ. ಇದನ್ನು ಪೇಸ್ಟ್ ತಯಾರಿಸುವ ಸಂದರ್ಭದಲ್ಲಿ ಸ್ವಲ್ಪ ಹಾಲು ಸೇರಿಸಿ ಇದನ್ನು ನಿಮ್ಮ ಪಾದಗಳ ಮತ್ತು ಹಿಮ್ಮಡಿಗಳ ಭಾಗದಲ್ಲಿ ವೃತ್ತಾಕಾರವಾಗಿ ಹಚ್ಚಿ. ಈಗ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ತೊಳೆದುಕೊಂಡು ನಂತರ ಮಾಯಿಶ್ಚರೈಸರ್ ಅನ್ವಯಿಸಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಪರಿಹಾರ ನಿಮಗೆ ಸಿಗುತ್ತದೆ.

ಇದಕ್ಕಾಗಿ ಒಂದು ಟೇಬಲ್ ಚಮಚ ಜೇನುತುಪ್ಪದ ಜೊತೆಗೆ ಎರಡು ಟೀ ಚಮಚ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಒಂದು ಟೇಬಲ್ ಚಮಚ ಸಾಸಿವೆ ಎಣ್ಣೆ ಸೇರಿಸುವುದು ಕಡ್ಡಾಯ. ಇದನ್ನು ಹಿಮ್ಮಡಿಗಳ ಭಾಗಕ್ಕೆ ಹಚ್ಚಿ ಅರ್ಧ ಗಂಟೆ ಹಾಗೆ ಬಿಡಿ. ನಂತರ ಊರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಪ್ರತಿದಿನ ಒಂದು ವಾರದವರೆಗೆ ಈ ಪರಿಹಾರ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

- Advertisement -

Related news

error: Content is protected !!