Tuesday, May 14, 2024
spot_imgspot_img
spot_imgspot_img

ಮೆಂತ್ಯೆ ಕಾಳಿನ ಸೇವನೆಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳು

- Advertisement -G L Acharya panikkar
- Advertisement -

ಮೆಂತ್ಯೆಕಾಳು- ಮೂರ್ತಿ ಸಣ್ಣದಾದರೂ, ಕಾರುಬಾರು ದೊಡ್ಡದು.ಮೆಂತ್ಯೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇರುವ ಕಾರಣದಿಂದಾಗಿ ಇದನ್ನು ಭಾರತೀಯರು ಹಿಂದಿನಿಂದಲೂ ತಮ್ಮ ದೈನಂದಿನ ಆಹಾರದಲ್ಲಿ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಇದು ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಕೂಡ ಇದರಲ್ಲಿದೆ.

ಪ್ರತಿಯೊಂದು ಅಡುಗೆ ಮನೆಯಲ್ಲಿ ಮೆಂತೆ ಕಾಳು ಪ್ರತಿನಿತ್ಯವು ಲಭ್ಯವಾಗುವುದು. ಮೆಂತೆ ಕಹಿಯಾಗಿದ್ದರೂ ಇದು ಯಾವುದೇ ಖಾದ್ಯಕ್ಕೂ ರುಚಿ ನೀಡುವುದು. ಇದರಿಂದ ಮೆಂತ್ಯೆಯನ್ನು ವಿವಿಧ ರೀತಿಯಿಂದ ಬಳಸಿಕೊಳ್ಳುವರು.ಪ್ರಮುಖವಾಗಿ ಮೆಂತ್ಯೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇರುವ ಕಾರಣದಿಂದಾಗಿ ಇದನ್ನು ಭಾರತೀಯರು ಹಿಂದಿನಿಂದಲೂ ತಮ್ಮ ದೈನಂದಿನ ಆಹಾರದಲ್ಲಿ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಇದು ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಕೂಡ ಇದರಲ್ಲಿದೆ.

ಹೆಚ್ಚಾಗಿ ತಲೆಬುರುಡೆಯು ಒಣಗಿ ಚರ್ಮದ ಸತ್ತ ಕೋಶಗಳು ಮೇಲೆ ಬಂದಾಗ ಕಾಡುವಂತಹ ಸಮಸ್ಯೆ ತಲೆಹೊಟ್ಟು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ ಹಲವಾರು ರೀತಿಯಿಂದ ಸಮಸ್ಯೆ ತರುವುದು. ಯಾರ ಎದುರು ಆತ್ಮವಿಶ್ವಾಸದಿಂದ ನಿಲ್ಲಲು ತಲೆಹೊಟ್ಟು ಬಿಡದು. ಇದರ ನಿವಾರಣೆಗೆ ಮೆಂತ್ಯೆ ಕಾಳನ್ನು ರಾತ್ರಿ ನೆನೆಸಲು ಹಾಕಬೇಕು. ಬೆಳಗ್ಗೆ ಎದ್ದ ಬಳಿಕ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಗೆ ಸ್ವಲ್ಪ ಮೊಸರು ಹಾಕಿಕೊಂಡು ಮಿಶ್ರಣ ಮಾಡಿ. ಇದು ತಯಾರಾದ ಬಳಿಕ ತಲೆಬುರುಡೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕೂದಲು ತೊಳೆಯಿರಿ. ನಿಯಮಿತವಾಗಿ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಮೆಂತ್ಯೆಕಾಳುಗಳು ಬ್ಲ್ಯಾಕ್ ಹೆಡ್ ನ್ನು ಪರಿಣಾಮಕಾರಿಯಾಗಿ ಬರದಂತೆ ತಡೆಯುವುದು ಮತ್ತು ನಿವಾರಣೆ ಮಾಡುವುದು. ಚರ್ಮದ ಕೆಳಭಾಗದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಚರ್ಮದ ಅಸಾಮಾನ್ಯತೆ ನಿವಾರಿಸುವುದು. ಮೆಂತೆ ಕಾಳಿನ ಪೇಸ್ಟ್ ಬಳಸಿಕೊಂಡು ಸುಟ್ಟ ಗಾಯ ನಿವಾರಣೆ ಮಾಡಬಹುದು. ಮೆಂತೆ ಪೇಸ್ಟ್ ಮಾಡಿ ಮತ್ತು ಅದಕ್ಕೆ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ರಾತ್ರಿ ವೇಳೆ ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಬೆಳಗ್ಗೆ ಎದ್ದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ಕಂಡುಬರುವುದು.

ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಮೆಂತ್ಯೆಕಾಳು ಸೇವಿಸಿದರೆ ಹೊಟ್ಟೆ ತುಂಬಿರುವಂತೆ ಮಾಡುವುದು. ಮೆಂತ್ಯೆಕಾಳಿನಲ್ಲಿ ಇರುವಂತಹ ನಾರಿನಾಂಶವು ಇದಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ಎರಡು ಚಮಚ ಮೆಂತ್ಯೆಕಾಳನ್ನು ನೆನೆಯಲು ಹಾಕಿ ಅದರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ದೇಹದಲ್ಲಿ ದ್ರವ ಶೇಖರಣೆ ತಡೆಯುವುದು ಮತ್ತು ಹೊಟ್ಟೆ ಉಬ್ಬರ ಕೂಡ.

ಮೆಂತ್ಯೆಕಾಳು ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ನ್ನು ನಿವಾರಿಸುವುದು. ಮೆಂತೆ ಕಾಳು ತ್ವಚೆಗೆ ಬಣ್ಣ ನೀಡುವುದು ಮತ್ತು ಸುಂದರವಾಗಿ ಕಾಣುವಂತೆ ಮಾಡುವುದು. ಮೆಂತ್ಯೆಕಾಳಿನ ಪೇಸ್ಟ್, ಮೆಂತೆ ನೆನೆಸಿದ ನೀರು, ಕಡಲೆ ಹಿಟ್ಟು ಮತ್ತು ಮೊಸರು ಬಳಸಿದ ಮೆಂತ್ಯೆಯ ಫೇಸ್ ಪ್ಯಾಕ್ ಮಾಡಿದರೆ ಚರ್ಮದಲ್ಲಿನ ಸತ್ತಕೋಶಗಳನ್ನು ಇದು ತೆಗೆಯುವುದು ಮತ್ತು ಕಪ್ಪು ವೃತ್ತಗಳನ್ನು ನಿವಾರಿಸುವುದು. ಇದರಿಂದ ಚರ್ಮವು ಬಣ್ಣ ಪಡೆಯುವುದು ಮತ್ತು ಕಾಂತಿಯುತವಾಗುವುದು.

- Advertisement -

Related news

error: Content is protected !!