- Advertisement -
- Advertisement -
ಉಡುಪಿ:- ಕರಾವಳಿ ಜಿಲ್ಲೆ ಉಡುಪಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ಐದರವರೆಗೆ ಉಡುಪಿಯಲ್ಲಿ ಧಾರಾಕಾರ ಮಳೆ ಸಾಧ್ಯತೆ ಇದೆ.
ಜುಲೈ ನಾಲ್ಕಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಳೆದ 24 ಗಂಟೆಯ ಉಡುಪಿ ಮಳೆ ವರದಿ ಬಿಡುಗಡೆ ಮಾಡಿರುವ ಇಲಾಖೆ, ಉಡುಪಿಯಲ್ಲಿ 34, ಕುಂದಾಪುರದಲ್ಲಿ 17 ಮಿಲಿ ಮೀಟರ್, ಕಾರ್ಕಳ ತಾಲೂಕಿನಲ್ಲಿ 24 ಮಿಲಿ ಮೀಟರ್ ಮಳೆ ಬಿದ್ದಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆ ಆರಂಭವಾಗಿದೆ.
ಕಳೆದ ರಾತ್ರಿಯೂ ಧಾರಾಕಾರ ಮಳೆಯಾಗಿದ್ದು, ಒಂದು ವಾರ ಮಳೆ ಮುಂದುವರಿಯಲಿದೆ. ಉಡುಪಿ ಜಿಲ್ಲೆಯ ಬಡಾನಿಡಿಯೂರು ಗ್ರಾಮದಲ್ಲಿ 85 ಮಿಲಿಮೀಟರ್, ತೆಂಕ ನಿಡಿಯೂರುನಲ್ಲಿ 62, ಬ್ರಹ್ಮಾವರದ ಹಂದಾಡಿ, ಹಾವಂಜೆ 48 ಮಿಲಿಮೀಟರ್, ಅಂಬಲ್ಪಾಡಿ46 ಮಿಲಿಮೀಟರ್ ಮಳೆಯಾಗಿದೆ. ನಾವುಂದ ಗ್ರಾಮದಲ್ಲಿ ಜಿಲ್ಲೆಯಲ್ಲೇ ಅತೀ ಕಡಿಮೆ ಐದು ಮಿಲಿಮೀಟರ್ ಮಳೆಯಾಗಿದೆ.
- Advertisement -