ಬೆಂಗಳೂರು : ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಆರಂಭಗೊಳ್ಳಬೇಕಿದ್ದ 2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿಲ್ಲ.ರಾಜ್ಯದ 8,9 ಮತ್ತು 10ನೇ ತರಗತಿ ಮಕ್ಕಳಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಮೂಲಕ ಬೋಧನೆ ಮಾಡುವ ‘ಸೇತುಬಂಧ’…ವೀಡಿಯೋ ಪಾಠಗಳನ್ನು ದಿನಾಂಕ 20-07-2020ರಿಂದ ಪ್ರಸಾರ ಮಾಡಲಾಗುತ್ತಿದೆ .
ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರುಗಳು ವಹಿಸಬೇಕಾದ ಕ್ರಮಗಳ ಕುರಿತು ಪ್ರತ್ಯೇಕವಾಗಿ ಸುತ್ತೋಲೆ ಹೊರಿಡಸಲಾಗುವುದು . ವಿದ್ಯಾರ್ಥಿಗಳ ಪಾಠ ಪ್ರಸಾರಕ್ಕೂ ಮುನ್ನಾ ಶಿಕ್ಷಕರುಗಳಿಗೆ ಮತ್ತು ಪೋಷಕರಿಗೆ ಅಗತ್ಯ ಮಾಹಿತಿ ನೀಡಲು ಮತ್ತು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗಿನ ಅನುಷ್ಠಾನಾಧಿಕಾರಿಗಳು ವಹಿಸಬೇಕಾದ ಕ್ರಮ ಕುರಿತು ಮಾಹಿತಿನೀಡಲಾಗಿದೆ.ಮೂರು ವಿಷಯಗಳ ಬೋಧನೆ ನಂತರ ಅರ್ಧ ಗಂಟೆ ವಿರಾಮ ನೀಡಲಾಗುತ್ತದೆ. 10 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ (ಮೂರು ತರಗತಿ) ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ (ಎರಡು ತರಗತಿ)ಪ್ರಸಾರ ಮಾಡಲಾಗುತ್ತದೆ….ಪ್ರತಿ ದಿನ ಬೆಳಗ್ಗೆ 9.30 ರಿಂದ 11 ರವರೆಗೆ ಹಾಗೂ 11.30 ರಿಂದ 12 ಗಂಟೆವರೆಗೆ ತರಗತಿ ನಡೆಸಲಾಗುತ್ತದೆ. ನಂತರ ಮಧ್ಯಾಹ್ನ 3 ರಿಂದ 4.30 ಹಾಗೂ ಸಂಜೆ 5 ರಿಂದ 5.30 ರ ವರೆಗೆ ತರಗತಿಗಳನ್ನು ಪ್ರಸಾರ ಮಾಡಲಾಗುತ್ತದೆ.