Saturday, May 4, 2024
spot_imgspot_img
spot_imgspot_img

ಗೋಮಾಳದ ಜಮೀನಿನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿ, ಗಡಿ ಗುರುತು ನಡೆಸಿ ಸಂರಕ್ಷಿಸುವಂತೆ ಹಿಂ.ಜಾ. ವೇದಿಕೆ ಹಾಗೂ ಕೆದಿಲ, ಪೆರಾಜೆ ಬಂಟ್ವಾಳ ಗೋಮಾಳ ಸಂರಕ್ಷಣಾ ಸಮಿತಿಯಿಂದ ಮನವಿ..

- Advertisement -G L Acharya panikkar
- Advertisement -

ಕೆದಿಲ ಮತ್ತು ಪೆರಾಜೆ ಗ್ರಾಮಗಳ ಗೋಮಾಳದ ಜಮೀನಿನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿ, ಗಡಿ ಗುರುತು ನಡೆಸಿ ಸಂರಕ್ಷಿಸಬೇಕಾಗಿ ಹಿಂದುಜಾಗರಣ ವೇದಿಕೆ ಹಾಗೂ ಕೆದಿಲ, ಪೆರಾಜೆ ಬಂಟ್ವಾಳ ಗೋಮಾಳ ಸಂರಕ್ಷಣಾ ಸಮಿತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮ ಸ.ನಂ 115/1 ರಲ್ಲಿ 14.56 ಎಕರೆ ವಿಸ್ತೀರ್ಣದ ಜಮೀನು ಮತ್ತು ಪೆರಾಜೆ ಗ್ರಾಮದ ಸ.ನಂ164/1 ಬಿ ರಲ್ಲಿ 19.75 ಎಕ್ಕರೆ ಗೋಮಾಳಕ್ಕೆ ಜಮೀನಾಗಿರುತ್ತದೆ. ಕೆದಿಲ ಗ್ರಾಮಕ್ಕೆ ಸೇರಿದ ಸ.ನಂ 115/1 ರಲ್ಲಿ 14.56 ಜಮೀನಿನಲ್ಲಿ ಅಕ್ರಮವಾಗಿ ಇತ್ತುವರಿ ಆಗಿ ಮನೆಗಳು ನಿರ್ಮಾಣವಾಗಿದ್ದು ಹಾಗೆಯೇ ಗೋಮಾಳದ ಜಮೀನನ್ನು ಕದಳಿಸುವ ಸಲುವಾಗಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗಿದ್ದು ಮಾರ್ಚ್ ತಿಂಗಳಲ್ಲಿ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಿರುತ್ತದೆ. ಈಗ ಪುನಃ ಅಕ್ರಮವಾಗಿ ಕಟ್ಟಡ ಶೆಡ್, ಯಂತ್ರದ ಮೂಲಕ ಮಣ್ಣು ಅಗೆದು ಸಮತಟ್ಟುಗೊಳಿಸಿ, ಕಟ್ಟಡಕ್ಕೆ ಪೌಂಡೇಶನ್ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ನಡೆಸಿರುತ್ತಾರೆ. ಹೀಗೆ ಮುಂದುವರಿದಲ್ಲಿ ಗೋಮಾಳ ಸಲುವಾಗಿ ಮೀಸಲಾದ ಸರಕಾರಿ ಜಮೀನು ಅನ್ಯರ ಅಕ್ರಮ ಒತ್ತುವರಿಗೆ ಒಳಗಾಗಿ ಸರಕಾರಿ ಜಮೀನು ಅಲಭ್ಯವಾಗುವ ಸಂಭವವಿರುತ್ತದೆ.

ಹಲವಾರು ಬಾರಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ಮನವಿ ಸಲ್ಲಿಸಿದರೂ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಗೋಮಾಳದ ಜಮೀನಿನಲ್ಲಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸದೇ, ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಒತ್ತುವರಿ ಮತ್ತು ನಿರ್ಮಾಣ ಕಾರ್ಯ ತಡೆರಹಿತವಾಗಿ ನಡೆಯುತ್ತಿರುತ್ತದೆ.

2013ರಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗಿ ದೂರು ಸಲ್ಲಿಕೆಯಾಗಿ ಅಶಾಂತ ವಾತಾವರಣ ನಿರ್ಮಾಣವಾಗಿರುತ್ತದೆ. ಆ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ದ.ಕ ಇವರು ಸದರಿ ಜಮೀನಿನಲ್ಲಿ ಒತ್ತುವರಿ ಆಗಿದ್ದಲ್ಲಿ ಒತ್ತುವರಿದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ. ಈವರೆಗೆ ಆ ಬಗ್ಗೆ ಯಾವುದೇ ಪ್ರಗತಿ ಆಗಿರುವುದಿಲ್ಲ. ಸದರಿ ಗೋಮಾಳಾದ ಜಮೀನಿನಲ್ಲಿ ಖಾಸಗಿ ಕೋಳಿಫಾರಂ ಕಟ್ಟಡ , ಕೃಷಿ ಇತ್ಯಾದಿಗಳಿಂದ ಅನಾಯಾಸವಾಗಿ ಒತ್ತುವರಿಯಾಗುತ್ತಿದೆ. ಇನ್ನಾದರೂ ಗೋಮಾಳದ ಜಮೀನಿನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿ ಗಡಿ ಗುರುತು ನಡೆಸಿ ಸಂರಕ್ಷಿಸಬೇಕಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

- Advertisement -

Related news

error: Content is protected !!