Saturday, June 6, 2026
spot_imgspot_img
spot_imgspot_img

ಯುವಕೇಸರಿ ಗಡಿಯಾರ ಸಂಘಟನೆ ವತಿಯಿಂದ ಮನೆ ಬೆಳಗೋಣ ವಿಶೇಷ ಕಾರ್ಯಕ್ರಮ

- Advertisement -
- Advertisement -

ಯುವಕೇಸರಿ ಗಡಿಯಾರ ಸಂಘಟನೆ ವತಿಯಿಂದ 2024 ದೀಪಾವಳಿಯ ಪ್ರಯುಕ್ತ ಮನೆ ಬೆಳಗೋಣ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ದೇಂತಡ್ಜ ಶ್ರೀವನದುರ್ಗಾ ಅಮ್ಮನವರ ಸನ್ನಿಧಿಯಲ್ಲಿ, ಸಂಘಟನೆ ಯುವಕೇಸರಿ ಗಡಿಯಾರ ವಿಕೃತಿಯಿಂದ ಸಂಸ್ಕೃತಿಯೆಡೆಗೆ ಎಂಬ ಘೋಷವಾಕ್ಯದೊಂದಿಗೆ, ಸನಾತನ ಸಂಸ್ಕೃತಿಯನ್ನು ನಾಶಮಾಡಲು ಬಂದ ಪಾಶ್ಚಾತ್ಯ ವಿಕೃತಿಯ ಅಂದಾನುಕರಣೆಯನ್ನು ಸನಾತನ ಧರ್ಮದಿಂದ ದೂರಗೊಳಿಸುವಲ್ಲಿ ಈ ಸಂಘಟನೆ ದುಡಿಯುತ್ತಿದೆ. ಅಲ್ಲದೆ ಅಖಂಡ ಭಜನಾ ಸಪ್ತಾಹ, ಏಕಾಹ ಭಜನೆಯನ್ನೂ ನಡೆಸುತ್ತಾ ಬಂದಿದೆ. ಅಲ್ಲದೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಹಲವಾರು ಶ್ರಮಧಾನ, ಅಶಕ್ತರಿಗೆ ನೆರವು ಮುಂತಾದ ಸಮಾಜ ಕಾರ್ಯದಲ್ಲಿ ಮುಂದಾಗಿದೆ.

ಕೆದಿಲ ಗ್ರಾಮದ ಗಡಿಯಾರದಲ್ಲಿ ವಾಸವಾಗಿರುವ ರಾಮ ಮೂಲ್ಯ (ಮಾತು ಬಾರದೆ, ಕಿವಿ ಕೇಳದೆ ಇರುವ ವ್ಯಕ್ತಿ) ಇವರು ದಂಪತಿಗಳಿಬ್ಬರೇ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಮನೆಗೆ ವಿದ್ಯುತ್ ಸಂಪರ್ಕವಿದ್ದರೂ ಕಳೆದ ಎರಡು ವರುಷಗಳಿಂದ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದರು. ಹಾಗೂ ಮನೆಯ ಮುಖ್ಯ ಬಾಗಿಲು ಮುರಿದು ಹೋಗಿತ್ತು.ಇದನ್ನು ಗಮನಿಸಿದ ಯುವಕೇಸರಿ ಗಡಿಯಾರ ಇವರ ಮನೆಗೆ ಹೊಸತಾದ ಮುಖ್ಯ ಬಾಗಿಲು ಹಾಗೂ ಬಾಕಿ ಇದ್ದ ವಿದ್ಯುತ್ ಬಿಲ್ ಪಾವತಿಸಿ, ವಯರಿಂಗ್ ಸರಿ ಪಡಿಸಿ ಎರಡು ವರುಷದಿಂದ ಕತ್ತಲಿನಲ್ಲಿದ್ದ ಮನೆ ಮತ್ತೆ ಬೆಳಗುವಂತೆ ಮಾಡಲಾಯಿತು.

ಯುವಕೇಸರಿ ಗಡಿಯಾರದ ಕಾರ್ಯಕರ್ತರೆಲ್ಲಾ ರಾಮ ಮೂಲ್ಯ ಅವರ ಮನೆಯಲ್ಲಿ ಸೇರಿ ಭಾರತ ಮಾತಾ ಪೂಜನ ಹಾಗೂ ದೀಪಾವಳಿ ಹಬ್ಬವನ್ನು ಆಚರಿಸಿದರು.

- Advertisement -

Related news

error: Content is protected !!