Saturday, June 27, 2026
spot_imgspot_img
spot_imgspot_img

ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರು ಅರೆಸ್ಟ್!

- Advertisement -
- Advertisement -

ಹುಬ್ಬಳ್ಳಿ: ಆಸ್ತಿಯ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಾಲ್ವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ಪ್ರಕರಣದ ಆರೋಪಿಗಳು ಮುನ್ನಾ, ಶ್ರೀನಿವಾಸ್, ಜಾವೀದ್, ಇಮ್ರಾನ್ ಬಂಧಿತ ಆರೋಪಿಗಳಾಗಿದ್ದಾರೆ.

ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ 1ಎಕರೆ 16ಗುಂಟೆ ಜಮೀನನ್ನು ಇಲ್ಲಿನ ಗೋಪನಕೊಪ್ಪ ಸ್ವಾಗತ ಕಾಲೋನಿಯ ವೀರೇಶ ಹೆಗಡಾಳ ಎಂಬುವರ ತಾಯಿಯ ಹೆಸರಿನಲ್ಲಿ ಬೇರೆಯವರಿಗೆ ಒತ್ತೆ ಹಾಕಿದ್ದು, ಈ ಜಮೀನನ್ನು ಮುನ್ನಾ ಬೇಪಾರಿ, ಅಲ್ತಾಫ ಬೇಪಾರಿ ಎಂಬುವರು ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಜಮೀನನ್ನು ವಾಪಸ್ಸು ಕೊಡುವಂತೆ ವೀರೇಶ ಕೇಳಿದ್ದಕ್ಕೆ ಗುರುವಾರ ರಾತ್ರಿ ಬೆಂಗೇರಿಯ ಸಂತೆ ಬಯಲಿಗೆ ವೀರೇಶನನ್ನು ಕರೆಯಿಸಿ, ಮಾರಣಾಂತಿಕ ಹಲ್ಲೆ ಮಾಡಿದ್ದರು. ಗಂಭೀರ ಗಾಯಗೊಂಡಿರುವ ವೀರೇಶ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯ ಬಗ್ಗೆ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!