- Advertisement -
- Advertisement -
ಮೈಸೂರು: ಹುಬ್ಲೋಟ್ ವಾಚ್ ಎಲ್ಲಿಂದ, ಹೇಗೆ ಬಂತು ಎಂಬುದರ ಬಗ್ಗೆ ಈಗಾಗಲೇ ತಂದೆ ಉತ್ತರ ಕೊಟ್ಟಿದ್ದಾರೆ. ಈ ವಿಚಾರ ವಿಧಾನಸಭೆಯ ರೆಕಾರ್ಡ್ ನಲ್ಲಿದೆ. ಆರೋಪ ಮಾಡೋರು ಬೇಕಾದರೆ ಹೋಗಿ ನೋಡಲಿ ಎಂದು ಬಿಜೆಪಿಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಹುಬ್ಲೋಟ್ ವಾಚ್ ಬಗ್ಗೆ ಆರೋಪ ಬಂದ ಕೂಡಲೇ ಅದನ್ನು ವಾಪಸ್ ಕೊಡಲಾಗಿದೆ. ವಿಧಾನಸಭೆಯಲ್ಲಿ ಇದನ್ನು ಪ್ರೆಸೆಂಟ್ ಮಾಡಲಾಗಿದೆ ಎಂದರು. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ಹುಬ್ಲೋಟ್ ವಾಚ್ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ತಂದೆಯ ಬೆನ್ನಿಗೆ ನಿಂತ ಯತೀಂದ್ರ ಸಿದ್ದರಾಮಯ್ಯ, ಲೆಕ್ಕ ಕೊಟ್ಟರೆ ಎಲ್ಲಿ ಭ್ರಷ್ಟಾಚಾರ ಬಯಲಾಗುತ್ತದೆ ಎಂದು ಈ ರೀತಿಯಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಟೀಕಿಸಿದರು.
- Advertisement -