Thursday, April 25, 2024
spot_imgspot_img
spot_imgspot_img

ಸ್ನೇಹಿತನ ಸಾಲಕ್ಕೆ ಶ್ಯೂರಿಟಿಯಾಗಿ ಸಹಿ ಮಾಡಿದ್ದ ಪೊಲೀಸ್ ಕಾನ್ಸ್​ಟೇಬಲ್​ ಆತ್ಮಹತ್ಯೆ!

- Advertisement -G L Acharya panikkar
- Advertisement -

ಹೈದರಾಬಾದ್​: ಸ್ನೇಹಿತನ ಸಾಲಕ್ಕೆ ಶ್ಯೂರಿಟಿಯಾಗಿ ಸಹಿ ಮಾಡಿದ್ದ ಹೈದರಾಬಾದ್​ ಕಾನ್ಸ್​ಟೇಬಲ್​ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.

ಅಭಿಲಾಶ್​ ನಾಯಕ್​ (33) ಮೃತ ದುರ್ದೈವಿ. ಅಭಿಲಾಶ್​ 2014ರಲ್ಲಿ ಪೊಲೀಸ್​ ಇಲಾಖೆಯ ಸೇವೆಗೆ ಸೇರಿದ್ದು, ಆತ ತನ್ನ ಪತ್ನಿ ಮತ್ತು ಪಾಲಕರೊಂದಿಗೆ ಹೈದರಾಬಾದ್​ನ ಸರ್ಕಾರಿ ಕ್ವಾಟ್ರಸ್​ನಲ್ಲಿ ಉಳಿದುಕೊಂಡಿದ್ದರು. ಅಭಿಲಾಶ್​ ಪತ್ನಿಯ ಹೆಸರು ಇಂದ್ರಜ್ಯೋತಿ. ದಂಪತಿಗೆ ಧೀರಜ್​ ಮತ್ತು ಹೇಮಂತ್​ ಹೆಸರಿನ ಇಬ್ಬರು ಗಂಡುಮಕ್ಕಳಿದ್ದು, ಮದನ್ನಪೇಟಾ ಪೊಲೀಸ್​ ಠಾಣೆಯಲ್ಲಿ ಕಳೆದ ಆರು ವರ್ಷದಿಂದ ಅಭಿಲಾಶ್​ ಸೇವೆ ಸಲ್ಲಿಸುತ್ತಿದ್ದರು.

ಅಭಿಲಾಶ್​ ಸಹೋದರ ಪ್ರಭುನಾಯಕ್​ ಜಿಎಚ್​ಎಂಸಿ ವಿಪತ್ತು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಶುಕ್ರವಾರ ಅಭಿಲಾಶ್​ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಕೊಡಾಡ ಪ್ರದೇಶಕ್ಕೆ ತೆರಳಿ ಅವರನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದರು. ಸೋಮವಾರ ಕೆಲಸಕ್ಕೂ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದ್ದು, ಊಟ ಮಾಡಿದ ಮೇಲೆ ಸ್ವಲ್ಪ ಮಲಗುವುದಾಗಿ ಹೇಳಿ ಕೋಣೆ ಸೇರಿದ ಅಭಿಲಾಶ್​, ಸಂಜೆಯಾದರೂ ಹಿಂದಿರುಗಲೇ ಇಲ್ಲ. ಆದರೂ ಗಾಢ ನಿದ್ರೆಗೆ ಜಾರಿರಬಹುದು ಎಂದು ಪಾಲಕರು ಸುಮ್ಮನಾಗಿದ್ದರು.

ಈ ನಡುವೆ ಸಹೋದರ ಪ್ರಭುನಾಯಕ್​ ಸುಮಾರು 10 ಗಂಟೆಗೆ ಮನೆಗೆ ಬಂದು ಅಭಿಲಾಶ್​ನನ್ನು ಅನೇಕ ಬಾರಿ ಕರೆದಿದ್ದಾನೆ. ಮಧ್ಯಾಹ್ನ ನಿದ್ರೆಗೆ ಜಾರಿದವರು ಇಷ್ಟೋತ್ತಾದರೂ ಬರಲಿಲ್ಲ ಮತ್ತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವಲ್ಲ ಎಂಬ ಅನುಮಾನದಿಂದ ಬಾಗಿಲು ಒಡೆದು ನೋಡಿದಾಗ ಅಭಿಲಾಶ್​ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಇಡೀ ಕುಟುಂಬ ಆಘಾತಕ್ಕೆ ಒಳಗಾಯಿತು.

ತಕ್ಷಣ ಪಾಲಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸುವಷ್ಟರಲ್ಲಿ ಅಭಿಲಾಶ್​ ಮೃತಪಟ್ಟಿದ್ದ. ಕೈ ಕುಯ್ದುಕೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅಭಿಲಾಶ್​ ಪ್ರಾಣ ಬಿಟ್ಟಿದ್ದಾನೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.ಅಭಿಲಾಶ್​ ತನ್ನ ಸ್ನೇಹಿತನ ಸಾಲಕ್ಕೆ ಶ್ಯೂರಿಟಿ ಸಹಿ ಹಾಕಿದ್ದ ಎನ್ನಲಾಗಿದೆ. ಕೊಟ್ಟ ಸಾಲವನ್ನು ಸ್ನೇಹಿತ ಹಿಂದಿರುಗಿಸದಿದ್ದಾಗ ಸಾಲ ಕೊಟ್ಟವನು ಅಭಿಲಾಶ್​ ಸಂಬಳದಿಂದ ಹಣ ಪಡೆದುಕೊಳ್ಳುತ್ತಿದ್ದ. ಇದರಿಂದಾಗಿ ಅಭಿಲಾಶ್​ಗೆ ಸಂಬಳ ಇಲ್ಲದಂತಾಗಿತ್ತು. ಈ ವಿಚಾರವನ್ನು ಮನೆಯವರಿಗೆ ತಿಳಿಸದೇ ರಹಸ್ಯವಾಗಿ ಇಟ್ಟಿದ್ದ. ಇದರಿಂದ ಖಿನ್ನತೆಗೆ ಜಾರಿ ಅಭಿಲಾಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

- Advertisement -

Related news

error: Content is protected !!