Tuesday, April 30, 2024
spot_imgspot_img
spot_imgspot_img

ಮನೆಯೊಂದರಲ್ಲಿ ಹೈಡ್ರೋ ಗಾಂಜಾ ಪ್ಲಾಂಟ್ಸ್ ಪತ್ತೆ; ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್

- Advertisement -G L Acharya panikkar
- Advertisement -
driving

ರಾಮನಗರ: ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿ, ವಾಸವಿದ್ದ ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆದ ವಿದೇಶಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇರಾನಿ ಮೂಲದ ಗಾಂಜಾ ಬೆಳೆಗಾರರನ್ನ ಇದೀಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮನಗರದ ಬಿಡದಿ ಈಗಲ್ ಟನ್ ವಿಲೇಜ್ ನ ವಿಲ್ಲಾದಲ್ಲಿ ಬೆಳೆದಿದ್ದ ಹೈಡ್ರೋ ಗಾಂಜಾವನ್ನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಹಾಗೆ, ಇರಾನಿ ಮೂಲದ ಜಾವಿದ್ ರುಸ್ತಂ ಪುರಿ (36) ಬಂಧಿತ ಆರೋಪಿ. ಈತನನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ಮಾಡಿದ ಬಳಿಕ ಆತ ಮನೆಯಲ್ಲಿ ಇಟ್ಟಿದ್ದ ಹೈಡ್ರೋ ಗಾಂಜಾ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಆತನ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಸುಮಾರು 150ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಕಳೆದ ಒಂದುವರೆ ವರ್ಷದಿಂದ ಈಗಲ್ ಟನ್ ವಿಲ್ಲಾದಲ್ಲೇ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿ ತಾನು ವಾಸವಿದ್ದ ಮನೆಯ ಟೆರೇಸ್ ಹಾಗೂ ರೂಂನಲ್ಲಿ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದ. ಈಗಲ್ಟನ್ ವಿಲೇಜ್ ನಲ್ಲಿ ಸಾವಿರದ ಐನೂರು ಸೈಟ್ ಗಳಿವೆ. ಈ ಪೈಕಿ ಸಾವಿರದ ಇನ್ನೂರು ಸೈಟ್ ಗಳು ಮಾರಾಟವಾಗಿವೆ. ಅದರಲ್ಲಿ ಮುನ್ನೂರು ಸೈಟ್ ಗಳಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ನಿರ್ಮಾಣವಾಗಿರೋ ಮುನ್ನೂರು ಮನೆಗಳ ಪೈಕಿ ಇಪ್ಪತ್ತು ಮನೆಗಳನ್ನ ಬಾಡಿಗೆ ನೀಡಲಾಗಿದೆ. ಈ ಪೈಕಿ ಪಂಜಾಬ್ ಮೂಲದ ವರುಣ್ ಸೈಗಲ್ ಎಂಬಾತನಿಂದ ಜಾವೀದ್ ವಿಲ್ಲಾವನ್ನ ಬಾಡಿಗೆಗೆ ಪಡೆದಿದ್ದ. ಇನ್ನು ಹೈಡ್ರೋ ಗಾಂಜಾವನ್ನ ಬೆಳೆಯಲು ಬೀಜಗಳನ್ನ ಆನ್ ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದನಂತೆ. ಈಗ ಬೆಳೆಯುತ್ತಿದ್ದ ಗಾಂಜಾವನ್ನ ಬೇರೆಯವರಿಗೆ ಸಪ್ಲೈ ಮಾಡುತ್ತಿದ್ದ. ಆತನನ್ನ ಬಂಧಿಸಿ ವಿಚಾರಣೆ ಮಾಡಿದಾಗ ಇರಾನಿ ಮೂಲದ ಜಾವಿದ್ ರುಸ್ತಂ ಪುರಿ ನಿಂದ ಖರೀದಿ ಮಾಡುತ್ತಿರೋದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ಇದೇ ಆಧಾರದ ಮೇಲೆ ಜಾವಿದ್ ರುಸ್ತಂ ಮೊಬೈಲ್ ಟ್ರಾಕ್ ಮಾಡಿ ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯಾ ಸತ್ಯತೆಗಳು ಹೊರಬಿದ್ದಿದೆ. ಇನ್ನು ಈತ ಬೆಳೆದಿದ್ದ ಹೈಡ್ರೋ ಗಾಂಜಾ ಬೆಲೆ ಮೂರು ಕೊಟಿಗೂ ಅಧಿಕ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಒಟ್ಟಾರೆಯಾಗಿ, ಗೌಪ್ಯವಾಗಿ ಗಾಂಜಾ ಬೆಳೆದು ಜನರಿಗೆ ಮಾರಾಟ ಮಾಡುತ್ತಿದ್ದ ಇರಾನಿ ಮೂಲದ ವ್ಯಕ್ತಿಯನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದ್ರೆ, ರಾಮನಗರ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹೈಡ್ರೋ ಗಾಂಜಾ ಬೆಳೆದಿದ್ದರು ಸ್ಥಳೀಯ ಪೊಲೀಸರಿಗೆ ಮಾಹಿತಿಯೇ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸ.

- Advertisement -

Related news

error: Content is protected !!