



ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಆರೋಪಿ ಫಯಾಜ್ ನನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದು ತನಿಖೆಯಲ್ಲಿ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಸತ್ಯಾಂಶಗಳನ್ನುಆರೋಪಿ ಬಿಚ್ಚಿಟ್ಟಿದ್ದಾನೆ. ತನ್ನೊಡನೆ ಮಾತನಾಡಲು ನಿರಾಕರಿಸಿದ ಕಾರಣಕ್ಕೆ ನೇಹಾಳನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿರುವುದಾಗಿ ನೇಹಾ ಹಿರೇಮಠ್ ಹಂತಕ ಫಯಾಜ್ ಜೈಲಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಘಟನೆ ನಡೆಯುವುದಕ್ಕೂ ಮುನ್ನ ಕಾಲೇಜು ಬಿಟ್ಟಿದ್ದೆ. ಒಂದು ವಾರದ ಹಿಂದೆ ಕಾಲೇಜಿನ ಬಳಿ ಹೋಗಿ ನೇಹಾಳ ಜೊತೆ ಮಾತನಾಡಿಸಲು ಯತ್ನಿಸಿದಾಗ ಅವಳು ನಿನ್ನ ಜೊತೆ ಮಾತನಾಡಲು ಇಷ್ಟವಿಲ್ಲ ಎಂದು ಅವಾಯ್ಡ್ ಮಾಡಿ ಹೊರಟು ಹೋಗಿದ್ದಳು. ಏ. 18 ರಂದು ಅವಳು ಪರೀಕ್ಷೆ ಬರೆಯಲು ಬಂದಿದ್ದಾಗ ಹೋಗಿ ಹತ್ತು ಬಾರಿ ಅವಳಿಗೆ ಚಾಕುವಿನಿಂದ ಚುಚ್ಚಿದೆ ಎಂದು ಫಯಾಜ್ ಹೇಳಿದ್ದಾನೆ. ಅವಳಿಗೆ ಚುಚ್ಚುವಾಗ ನನಗೂ ಸಹ ಕೈಬೆರಳುಗಳಿಗೆ ಗಾಯವಾಗಿದೆ ಎಂದು ಫಯಾಜ್ ಹೇಳಿಕೊಂಡಿದ್ದಾನೆ. ಆದರೆ 9 ಬಾರಿ ಅಲ್ಲ, ಬರೋಬ್ಬರಿ 14 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ.
ಫಯಾಜ್, 30 ಸೆಕೆಂಡ್‌ಗಳಲ್ಲಿ 14 ಬಾರಿ ಇರಿದಿದ್ದಾನೆ. ವಿದ್ಯಾರ್ಥಿನಿಯ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೊದಲು 14 ಬಾರಿ ಹೃದಯಕ್ಕೆ ಚಾಕು ಇರಿದ ಫಯಾಜ್, ನಂತರ ರಕ್ತನಾಳಗಳನ್ನು ಕತ್ತರಿಸಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.