Friday, May 3, 2024
spot_imgspot_img
spot_imgspot_img

ವಿಟ್ಲ: ನಾನು ಏನೇ ಮಾತಾಡಿದರು ಬಿಜೆಪಿಯವರು ತಿರುಚಿ ಅಪಪ್ರಚಾರ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ, ಬಿಜೆಪಿಗರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ಧ- ಅಶೋಕ್ ಕುಮಾರ್ ರೈ

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಗ್ರಾಮದ ಉರಿಮಜಲಿನಲ್ಲಿ ನಡೆದ ಇಡ್ಕಿದು ವಲಯ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ಏನೇ ಮಾತಾಡಿದರು ಬಿಜೆಪಿಯವರು ಅದನ್ನು ತಿರುಚಿ ನನ್ನ ಬಗ್ಗೆ ಅಪಪ್ರಚಾರ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ನಾನು ಯಾವತ್ತು ಯಾವುದೇ ಪಕ್ಷ, ಜಾತಿಯನ್ನು ನಿಂಧಿಸಿದವನಲ್ಲ. ಎಲ್ಲಾ ಜಾತಿ, ಪಕ್ಷವನ್ನು ಸಮಾನವಾಗಿ ಕಂಡವ ನಾನು, ಬಿಜೆಪಿಗರು ನಡೆಸುತ್ತಿರುವ ಭ್ರಷ್ಟಾಚಾರ ಕಂಡು ಎಂದಿಗೂ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳಲಾರೆ ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ಧ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿದವರು ಹೇಳಿದರು.

ಬೆಂಗಳೂರನ್ನು ಬಿಟ್ಟರೆ ಅತೀ ಹೆಚ್ಚು ತೆರಿಗೆ ಪಾವತಿಸುವ ಪ್ರದೇಶವೆಂದರೆ ಅದು ಮಂಗಳೂರು, ಆದರೆ ನಮ್ಮಲ್ಲಿ ಹೇಳುವಂತಹ ಅಭಿವೃದ್ಧಿ ಏನೂ ಆಗಿಲ್ಲ. ಪುತ್ತೂರಿಗೆ ಅತೀ ಅಗತ್ಯವಿರುವ ಮೆಡಿಕಲ್‌ ಕಾಲೇಜು ನಿರ್ಮಾಣ ಮಾಡುವ ಕೆಲಸ ರಾಜ್ಯ ಹಾಗು ಕೇಂದ್ರದಲ್ಲಿರುವ ಬಿಜೆಪಿ ಸರಕಾರದಿಂದ ಆಗಿಲ್ಲ. ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವವನ್ನು ಹೇಳಿಕೊಂಡು ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಳಮಟ್ಟದ ಕಾರ್ಯಕರ್ತರನ್ನು ಬಲಿಷ್ಠಗೊಳಿಸುವ ಕೆಲಸವಾಗಬೇಕು. ನಿಜ ವಿಚಾರ ಹೇಳಿ ಜನರ ಮನಸ್ಸನ್ನು ಪರಿವರ್ತನೆ ಮಾಡುವ ಕೆಲಸವಾಗಬೇಕು. ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯಧರ್ಮವನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ನಾನು ಯಾವತ್ತೂ ಜಾತಿ-ಭೇದ ಮಾಡಿಲ್ಲ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ. ಮಾನವೀಯತೆಯ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ನಿಮ್ಮ ಘನತೆ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ವ್ಯತ್ಯಾಸಗಳು ಎಲ್ಲಾ ಕಡೆಯಲ್ಲಿದೆ ಅದನ್ನು ಸರಿಪಡಿಸಿಕೊಂಡು ಮುನ್ನಡೆಯೋಣ, ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಸಹಕರಿಸಿ ಎಂದರು.

- Advertisement -

Related news

error: Content is protected !!