Tuesday, March 2, 2021

ಇಡ್ಕಿದು ಗ್ರಾಮದ ದೇವಸ್ಯ ಶ್ರೀ ಚಾಮುಂಡಿ ಗುಳಿಗ ಕ್ಷೇತ್ರದಲ್ಲಿ ‘ಭಕ್ತಿದ ಪುರ್ಪ’ ಧ್ವನಿಸುರುಳಿ ಬಿಡುಗಡೆ

ವಿಟ್ಲ: ಇಡ್ಕಿದು ಗ್ರಾಮದ ದೇವಸ್ಯ ಶ್ರೀ ಚಾಮುಂಡಿ ಗುಳಿಗ ಕ್ಷೇತ್ರದಲ್ಲಿ ‘ಭಕ್ತಿದ ಪುರ್ಪ’ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕೆ.ಎಸ್. ಮುಕ್ಕುಡ ರವರು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು.

ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಧ್ವನಿಸುರುಳಿಯ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಎಪಿಎಂಸಿ ಸದಸ್ಯ ಜಗದೀಶ್ ದೇವಸ್ಯ, ಅಕ್ಷಯ್ ರಜಪೂತ್, ಹರೀಶ್ ಆಚಾರ್ಯ ಪುತ್ತೂರು, ಆನಂದ ದೇವಸ್ಯ, ಶಶಾಂಕ್ ಸೂರ್ಯ, ಅವ್ಯ ಪುತ್ತೂರು, ಸಂದೀಪ್ ಬಿ. ಧರ್ಮನಗರ, ದೀಪಕ್ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.

ಭಕ್ತಿದ ಪುರ್ಪ ತುಳು ಭಕ್ತಿಗೀತೆಗೆ ಶಶಾಂಕ್ ಸೂರ್ಯ ಸಾಹಿತ್ಯ ನೀಡಿದ್ದು, ಅವ್ಯ ಪುತ್ತೂರು ಹಾಗೂ ಸಂದೀಪ್ ಬಿ. ಧರ್ಮನಗರ ರವರು ಈ ಭಕ್ತಿಗೀತೆಯನ್ನು ಹಾಡಿದ್ದು, ದೀಪಕ್ ದೇವಸ್ಯ ಸಲಹೆ ಸಹಕಾರ ನೀಡಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!