Monday, February 10, 2025
spot_imgspot_img
spot_imgspot_img

ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ; 40 ವರ್ಷಗಳ ಬಳಿಕ ಆಡಳಿತ ಮಂಡಳಿ ಚುನಾವಣೆ

- Advertisement -
- Advertisement -

ಬಂಡಾಯದ ನಡುವೆಯು ಭರ್ಜರಿ ಜಯಭೇರಿ ಗಳಿಸಿದ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ

ವಿಟ್ಲ: ಇಡ್ಕಿದು ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಎಲ್ಲಾ 12 ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿದೆ. 3 ಸ್ಥಾನಕ್ಕೆ ಸ್ಪರ್ದಿಸಿದ್ದ ಕಾಂಗ್ರೆಸ್ ಖಾತೆ ತೆರೆಯಲು ವಿಫಲಗೊಂಡಿದೆ‌. ನಾಲ್ಕು ಸ್ಥಾನಗಳಿಗೆ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಉಳಿದ ಎಂಟು ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಎಲ್ಲಾ ಎಂಟು ಸ್ಥಾನಗಳಲ್ಲಿ ಕೂಡ ಸಹಕಾರಿ ಭಾರತಿ ಅಭ್ಯರ್ಥಿಗಳು ಭಾರಿ ಮತಗಳ ಅಂತರದಲ್ಲಿ ಗೆಲುವು ಪಡೆದರು.

40 ವರ್ಷಗಳಿಂದ ಚುನಾವಣೆ ಇಲ್ಲದೇ ಇಲ್ಲಿ ನಡೆಯುತ್ತಿದ್ದು ಈ ಬಾರಿ ಮೊದಲ ಬಾರಿ ಸ್ವಪಕ್ಷೀಯರ ಬಂಡಾಯ ಕಾದಾಟ ಹೋರಾಟ ಇತ್ತು. ಜತೆಗೆ ಕಾಂಗ್ರೆಸ್ ಸ್ಪರ್ಧೆಯೂ ಇತ್ತು. ಎಲ್ಲದರ ನಡುವೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಜಯದ ಹೂ ನಗೆ ಬೀರಿತು. ಬಿಜೆಪಿಯಿಂದ ಹಾರಿ ಆಮ್ ಆದ್ಮಿಪಕ್ಷ (ಆಪ್ ) ಬಂಟ್ವಾಳ ವಿಧಾನ ಸಭೆಗೆ ಸ್ಪರ್ದಿಸಿದ ಪುರುಷೋತ್ತಮ ಕೋಲ್ಪೆ, ಜಗದೀಶ ದೇವಸ್ಯ, ರಮಾನಂದ ಶರ್ಮ ಮಿತ್ತೂರು, ಕೆ.ಜಿ ನಾರಾಯಣ ರಾವ್‌ ನೆರ್ಲಾಜೆ , ಮತ್ತು ರಮೇಶ್‌ ಚಂದ್ರ ಭಟ್‌‌ ಎನ್‌.ಎಸ್‌ ಪಾಂಡೇಲು ಐದು ಜನರು ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು.

ಚುನಾವಣಿಯಲ್ಲಿ ಆಯ್ಕೆಗೊಂಡ ನಿರ್ದೇಶಕರು ಸುಧಾಕರ ಶೆಟ್ಟಿ ಬೀಡಿನಮಜಲು( ಕಳೆದ ಸಾಲಿನ ಅಧ್ಯಕ್ಷರು), ರಾಮ ಭಟ್ ನೀರಪಳಿಕೆ, (ಕಳೆದ ಸಾಲಿನ ಉಪಾಧ್ಯಕ್ಷರು), ಚಂದ್ರಹಾಸ, ಜಯಂತ, ಪದ್ಮಾವತಿ, ವಿದ್ಯಾ.ವಿ, ನವೀನ ಕೆ.ಪಿ.‌, ಹೃಷಿಕೇಶ್ ಕೆ. ಎಸ್ (ಚುನಾವಣೆ ಮೂಲಕ ಆಯ್ಕೆಗೊಂಡವರು) ಆನಂದ. ಕೆ. ಸತೀಶ್ ಕೆ ಉಮೇಶ್ ಮತ್ತು ಲೋಹಿತಾಶ್ವ ( ಈ ನಾಲ್ವರು ಅವಿರೋಧವಾಗಿ ಆಯ್ಕೆಗೊಂಡವರು)

ಈ ಸಂದರ್ಭದಲ್ಲಿ ಸಹಕಾರ ಭಾರತೀಯ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷರು ಮತ್ತು ಕ್ಯಾಂಪ್ಕೊ ಸಂಸ್ಥೆ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನೂತನ ನಿರ್ದೇಶಕರನ್ನು ಅಭಿನಂದಿಸಿದರು‌.

ಇಡ್ಕಿದು ಸೇವಾ ಸಹಕಾರಿ ಸಂಗದ ಮಾಜಿ ಅದ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು ಎಲ್ಲಾ ನಿರ್ದೇಶಕರ ಪರವಾಗಿ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಇಡ್ಕಿದು ಗ್ರಾಮಪಂಚಾಯತ್ ಸದಾಸ್ಯರಾದ ಸುಧೀರ್ ಕುಮಾರ್ ಶೆಟ್ಟಿ ಚುನಾವಣೆ ನಡೆಸಿಕೊಟ್ಟ ಅಧಿಕಾರಿಗಳಿಗೆ, ಸಹಕಾರ ನೀಡಿದ ಪೊಲೀಸರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದ ನೀಡಿದರು.

ಅಭ್ಯರ್ಥಿಗಳ ಪಡೆದ ಮತ ವಿವರ;

ರಮಾನಂದ ಬಿ ಶರ್ಮಾ ಮಿತ್ತೂರು 71
ಪುರುಷೋತ್ತಮ ಕೋಲ್ಪೆ 113
ಜಗದೀಶ ದೇವಸ್ಯ 165
ಕೆ.ಜಿ ನಾರಾಯಣ ರಾವ್‌ ನೆರ್ಲಾಜೆ 40
ರಮೇಶ್‌ ಚಂದ್ರ ಭಟ್‌‌ ಎನ್‌.ಎಸ್‌ ಪಾಂಡೇಲು 78
ಚಂದ್ರಹಾಸ 573
ಜಯಂತ 510
ರಾಮ್ ಭಟ್ ನೀರಪಳಿಕೆ 555
ಸುಧಾಕರ ಶೆಟ್ಟಿ ಬೀಡಿನಮಜಲು 569
ಹೃಷಿಕೇಶ್‌ ಕೆಎಸ್ 509
ಪದ್ಮಾವತಿ 586
ವಿದ್ಯಾ ವಿ 555
ನವೀನ ಕೆಪಿ 544
ಮೋಹನ್ ಗುರ್ಜಿನಡ್ಕ 192
ರಂಜಿತಾ ಪಿ ಶೆಟ್ಟಿ 202
ಸಾದಿಕ್ ಮಿತ್ತೂರು 126

ಒಟ್ಟು 810 ಮತಗಳಲ್ಲಿ 767 ಮತ ಚಲಾವಣೆಯಾಗಿದ್ದು ಶೇಕಡಾ 94.70 ಮತದಾನವಾಗಿದೆ.

ಶ್ರೀಮತಿ ಡಾ. ಜ್ಯೋತಿ ಡಿ ರಿಟರ್‌ನಿಂಗ್‌‌ ಅಧಿಕಾರಿ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಬಂಟ್ವಾಳ ತಾಲೂಕು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ್ ಮತ್ತು ಅವರ ತಂಡ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

- Advertisement -

Related news

error: Content is protected !!