- Advertisement -
- Advertisement -
ವಿಟ್ಲ: ಪವಿತ್ರ ರಮಝಾನ್ ತಿಂಗಳ ಉಪವಾಸ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಾಳೆ (ಮಾ.20) ದೇಶದಾದ್ಯಂತ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಲಿದ್ದಾರೆ.

ಒಂದು ತಿಂಗಳ ಉಪವಾಸ, ಪ್ರಾರ್ಥನೆ ಹಾಗೂ ದಾನ ಧರ್ಮಗಳಲ್ಲಿ ತೊಡಗಿದ್ದ ಭಕ್ತರು ಚಂದ್ರದರ್ಶನವಾದ ನಂತರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿದೆ. ಹಬ್ಬದ ದಿನ ವಿಶೇಷ ನಮಾಝ್‌ಗಳನ್ನು ಮಸೀದಿಗಳಲ್ಲಿ ಸಲ್ಲಿಸಲಾಗುತ್ತದೆ. ಹಬ್ಬದ ಪ್ರಯುಕ್ತ ಮನೆಮನೆಗಳಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದ್ದು, ಬಂಧು-ಬಳಗ, ಸ್ನೇಹಿತರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಬಡವರಿಗೂ ಸಹಾಯ ಮಾಡುವ ‘ಜಕಾತ್ ಅಲ್ ಫಿತ್ರ್’ ನೀಡುವ ಪರಂಪರೆಗೂ ವಿಶೇಷ ಮಹತ್ವವಿದೆ. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆಗಳಿಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ಹಬ್ಬವನ್ನು ಆಚರಿಸಲು ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.
- Advertisement -








