



ನಮ್ಮ ಮೆಟ್ರೋ ನಿಯಮಗಳಿಗೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ತುಂಬಾ ರಶ್ ಇದೆ ಮುಂದಿನ ಮೆಟ್ರೋ ಹತ್ತೋಣ ಅಂತ 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿ ಕಾಯುತ್ತಾ ಕುಳಿತರೆ ದಂಡ ಗ್ಯಾರಂಟಿ.
ಇದೀಗಾ 5 ನಿಮಿಷಕ್ಕಿಂತ ಹೆಚ್ಚು ಕಾಲ ಮೆಟ್ರೋ ಸ್ಟೇಷನ್ನಲ್ಲಿ ಇದ್ದಿದ್ದಕ್ಕೆ ಪ್ರಯಾಣಿಕರೊಬ್ಬರು ದಂಡ ಕಟ್ಟಿರುವಂತಹ ಘಟನೆ ಇತ್ತೀಚೆಗೆ ರಾತ್ರಿ ವಿಜಯನಗರ ಮೆಟ್ರೋ ಸ್ಟೇಷನ್ನಲ್ಲಿ ಘಟನೆ ನಡೆದಿದೆ. ಬಿಎಂಆರ್ಸಿಎಲ್ನ ಈ ರೂಲ್ಸ್ನಿಂದ ಪ್ರಯಾಣಿಕರು ದಂಗಾಗಿದ್ದಾರೆ.
ಮೊಬೈಲ್ನಲ್ಲಿ ಚಾರ್ಜ್ ಇಲ್ಲದ ಕಾರಣ ಮೆಟ್ರೋ ಸ್ಟೇಷನ್ನಲ್ಲಿ ಪ್ರಯಾಣಿಕರೊಬ್ಬರು ಚಾರ್ಜ್ ಹಾಕಿಕೊಂಡಿದ್ದಾರೆ.20 ನಿಮಿಷ ಆಗಿ ಮತ್ತೂ 5 ನಿಮಿಷ ಜಾಸ್ತಿ ಇದ್ದಿಯಾ ಹಾಗಾಗಿ ದಂಡ ಕಟ್ಟುವಂತೆ ಮೆಟ್ರೋ ಸಿಬ್ಬಂದಿಗಳಿಂದ ಕಿರಿಕ್ ಮಾಡಲಾಗಿದೆ. 5 ನಿಮಿಷಕ್ಕಿಂತಲೂ ಹೆಚ್ಚು ಹೊತ್ತುಇದ್ದೀಯಾ ದಂಡ ಕಟ್ಟು ಎಂದಿದ್ದಾರೆ.
ಮಳೆ ಇದೆ, ಚಾರ್ಜ್ ಇರಲಿಲ್ಲ ಹೀಗಾಗಿ ಲೇಟ್ ಆಯ್ತು ಅಂದರೂ ಮೆಟ್ರೋ ಸಿಬ್ಬಂದಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಸ್ಟೇಷನ್ನಲ್ಲಿ ಕೇವಲ 20 ನಿಮಿಷವಷ್ಟೇ ಇರಲು ಅನುಮತಿ. ಕೇವಲ 1 ನಿಮಿಷ ಹೆಚ್ಚಾದರೂ ದಂಡ ಪಾವತಿ ಮಾಡಲೇಬೇಕು ಎಂದು ಹೇಳಿದ್ದಾರೆ.
ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೂಲ್ಸ್ ಮೆಟ್ರೋ ಆರಂಭವಾದಗಿನಿಂದಲೂ ಇದೆ. ಈಗ ಹೊಸದಾಗಿ ಮಾಡಿದ ರೂಲ್ಸ್ ಅಲ್ಲ ಇದು. ಟೋಕನ್ ತೆಗೆದುಕೊಂಡು ಮೆಟ್ರೋ ಸ್ಟೇಷನ್ನಲ್ಲಿ ಗಂಟೆಗಟ್ಟಲೇ ಟೈಮ್ ಪಾಸ್ ಮಾಡಬಾರದು, ಸಹ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ಈ ರೂಲ್ಸ್ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಿದ್ದಾರೆ.