Friday, June 19, 2026
spot_imgspot_img
spot_imgspot_img

‘ನೀವು ನಮ್ಮ ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರೇ ನಿಲ್ಲಿಸ್ತೇವೆ’- ಧಮ್ಕಿ ಹಾಕಿದ ಪಾಕ್ ಸೇನಾ ವಕ್ತಾರ

- Advertisement -
- Advertisement -

ಇಸ್ಲಮಾಬಾದ್: ನೀವು ನಮ್ಮ ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರೇ ನಿಲ್ಲಿಸುತ್ತೇವೆ ಎಂದು ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್ ಷರೀಫ್ ಧಮ್ಕಿ ಹಾಕಿದ್ದಾನೆ.

ನೀವು ನಮಗೆ ಬರಬೇಕಾದ ನೀರನ್ನು ನಿರ್ಬಂಧಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸ್ತೇವೆ ಎಂದು ಹೇಳಿದ್ದ ಉಗ್ರ ಹಫೀಜ್ ಸಯೀದ್ ಮಾತನ್ನೇ ಅಹ್ಮದ್ ಷರೀಫ್ ಪುನರುಚ್ಚರಿಸಿದ್ದಾನೆ. ಇದೀಗ ಪಾಕ್ ಸೇನಾ ವಕ್ತಾರ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮದಲ್ಲಿ ಮಾತಾಡುತ್ತಿರುವ ವೀಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ಸಿಂಧೂ ನದಿ ನೀರಿನ ಒಪ್ಪಂದ ಅಮಾನತು ಮಾಡಿರುವ ವಿಚಾರ ಪ್ರಸ್ತಾಪಿಸಿದ ಆತ ಭಾರತ ನೀರು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನು ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಭಾರತದ ಈ ಕ್ರಮವನ್ನು ಉಲ್ಲೇಖಿಸಿ, 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಕೂಡ ಇದೇ ಹೇಳಿಕೆ ನೀಡಿದ್ದ.

- Advertisement -

Related news

error: Content is protected !!